Wednesday, October 8, 2025
Homeಚುನಾವಣೆ 2023Breaking: ಬಿಜೆಪಿಯ ಮತ್ತೊಂದು ವಿಕೆಟ್‌ ಪತನ : ರಾಜಿನಾಮೆ ನೀಡಲು ಶೆಟ್ಟರ್ ತೀರ್ಮಾನ

Breaking: ಬಿಜೆಪಿಯ ಮತ್ತೊಂದು ವಿಕೆಟ್‌ ಪತನ : ರಾಜಿನಾಮೆ ನೀಡಲು ಶೆಟ್ಟರ್ ತೀರ್ಮಾನ

ಹುಬ್ಬಳ್ಳಿ: ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡೋದಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಘೋಷಿಸಿದ್ದಾರೆ. ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಷಿ, ಬಸವರಾಜ್‌ ಬೊಮ್ಮಾಯಿ ನಡೆಸಿದ ಸಂಧಾನ ವಿಫಲವಾದ ಹಿನ್ನೆಲೆ ಜಗದೀಶ್‌ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡೋ ನಿರ್ಧಾರ ಮಾಡಿದ್ದಾರೆ

ಟಿಕೆಟ್‌ ನೀಡದ ಹಿನ್ನೆಲೆಯಲ್ಲಿ ಸಿಟ್ಟಗೆದ್ದಿದ್ದ ಶೆಟ್ಟರ್ ಕಳೆದೆರಡು ದಿನಗಳಿಂದ ಹೈಕಮಾಂಡ್ ಗೆ ಗಡುವು ನೀಡಿದ್ರು.. ಟಿಕೆಟ್‌ ನೀಡದಿದ್ದಕ್ಕೆ ಕಾರಣ ಕೇಳಿದ್ದ ಶೆಟ್ಟರ್ ನಾಯಕರ ಭೇಟಿ ನಂತರ ತೀರ್ಮಾನ ತಿಳಿಸೋದಾಗಿ ಹೇಳಿದ್ರು.. ಇಂದು ನಾಯಕರ ಮನವೊಲಿಕೆ ಸಭೆ ವಿಫಲವಾದ್ದರಿಂದ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡೋದಾಗಿ ಘೋಷಿಸಿದ್ದಾರೆ. ಅಲ್ಲದೇ ತಾವು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದು ಖಚಿತ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಹೆಚ್ಚಿನ ಸುದ್ದಿ