Monday, March 2, 2026
Homeಚುನಾವಣೆ 2023ಬಿಜೆಪಿ ಹೈಕಮಾಂಡ್‌ಗೆ ಡೆಡ್‌ಲೈನ್ : ಸವದಿ ಹಾದಿಯಲ್ಲಿ ಶೆಟ್ಟರ್?

ಬಿಜೆಪಿ ಹೈಕಮಾಂಡ್‌ಗೆ ಡೆಡ್‌ಲೈನ್ : ಸವದಿ ಹಾದಿಯಲ್ಲಿ ಶೆಟ್ಟರ್?

ಬೆಂಗಳೂರು: ಬಿಜೆಪಿ ಟಿಕೆಟ್‌ ನೀಡದಿದ್ದಕ್ಕೆ ಸಿಟ್ಟಾಗಿರುವ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಡಬಲ್ ಇಂಜಿನ್ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆವರೆಗೆ ಬಿಜೆಪಿಗೆ ಡೆಡ್‌ಲೈನ್‌ ನೀಡಿರುವ ಶೆಟ್ಟರ್, ಟಿಕೆಟ್‌ ನೀಡದಿದ್ರೆ ಮುಂದಿನ ನಿರ್ಧಾರ ಮಾಡೋದಾಗಿ ಹೇಳಿದ್ದಾರೆ. ಟಿಕೆಟ್‌ ತಪ್ಪಿದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಬಿಜೆಪಿ ತನ್ನನ್ನು ನಡೆಸಿಕೊಂಡ ರೀತಿ ಸರಿ ಇಲ್ಲ ಎಂದು ಕಿಡಿ ಕಾರಿದ್ದರು.

ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ‘ನಾನು ಪಾಸಿಟಿವ್ ಆಗಿ ಯೋಚನೆ ಮಾಡ್ತೀನಿ. ಇಗಲೂ ಆಶಾಭಾವ ಹೊಂದಿದ್ದೇನೆ. ಈಗಾಗಲೇ ನಾನು ವರಿಷ್ಠರನ್ನು ಭೇಟಿ ಮಾಡಿ ಎರಡು ದಿನ ಕಳೆದಿದೆ. ನಾಯಕರು ತೀರ್ಮಾಅಅನ ಹೇಳದೇ ಹೋದ್ರೆ ನಾನು ಯೋಚನೆ ಮಾಡುತ್ತೇನೆ. ಅಭಿಮಾನಿಗಳ ಸಭೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇನೆ’ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದ್ದರು.

ಇಂದು (ಏಪ್ರಿಲ್15) 11 ಗಂಟೆಯವರೆಗೆ ಬಿಜೆಪಿ ನಾಯಕರಿಗೆ ಸಮಯ ನೀಡಿರುವ ಶೆಟ್ಟರ್ ಅವರು ಒಂದು ವೇಳೆ ಅಂದುಕೊಂಡಂತೆ ಆಗದೇ ಇದ್ದಲ್ಲಿ ನಾನು ಬೇರೆ ರೀತಿ ಯೋಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಶೆಟ್ಟರ್‌ ಹೇಳಿಕೆ ಭಾರೀ ಚರ್ಚೆಯಾಗುತ್ತಿದ್ದು, ಒಂದು ವೇಳೆ ಬಿಜೆಪಿ ಟಿಕೆಟ್‌ ನೀಡದಿದ್ರೆ, ಶೆಟ್ಟರ್ ಪಕ್ಷೇತರರಾಗಿ ಕಣಕ್ಕಿಳೀತಾರಾ? ಅಥವಾ ಲಕ್ಷ್ಮಣ ಸವದಿ ರೀತಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗ್ತಾರಾ ಎಂಬ ವಿಚಾರಗಳು ಚರ್ಚೆಯಾಗುತ್ತಿವೆ.

ಹೆಚ್ಚಿನ ಸುದ್ದಿ