ಗೋಪಾಲ್ ಪುರ: ಪ್ರಯಾಣಿಕ ಬಸ್ ಒಂದರಲ್ಲಿ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ಸ್ಪೋಟಕಗಳು ಮತ್ತು ಜಿಲಾಟಿನ್ ಡಿಟೋನೇಟರ್ ಗಳನ್ನು ಅಸ್ಸಾಂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.
ಬಸ್‌ನಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ಸಾಗಿಸುತ್ತಿರುವ ಬಗ್ಗೆ ಪೊಲೀಸರಿಗೆ ಗುಪ್ತಚರ ಮಾಹಿತಿ ಲಭಿಸಿತ್ತು. ಮಾಹಿತಿಯ ಆಧಾರದ ಮೇಲೆ ಗೋಲ್ಪಾರಾ ಜಿಲ್ಲೆಯ ಪೊಲೀಸ್ ತಂಡ ಮತ್ತು ಕೃಷ್ಣಾಯ್ ಪೊಲೀಸ್ ಠಾಣೆ ಜಂಟಿ ಕಾರ್ಯಾಚರಣೆ ನಡೆಸಿದೆ.
“ನಾವು ಈ ಸಂಬಂಧ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದೇವೆ. 1162 ಜೆಲಾಟಿನ್ ಮತ್ತು 998 ಡಿಟೋನೇಟರ್‌ಗ ಳನ್ನು ವಶಪಡಿಸಿಕೊಳ್ಳಲಾಗಿದೆ. ಬಸ್ ಮೇಘಾಲಯದಿಂದ ಬರುತ್ತಿತ್ತು.ಈ ಬಗ್ಗೆ ತನಿಖೆ ಮುಂದುವರಿದಿದೆ” ಎಂದು ಗೋಲ್‌ಪಾರಾ ಎಎಸ್‌ಪಿ ರಿತುರಾಜ್ ಡೋಲಿ ಮಾಹಿತಿ ನೀಡಿದ್ದಾರೆ.
