Monday, October 13, 2025
Homeಟಾಪ್ ನ್ಯೂಸ್ಪ್ರಭಾಸ್, ಕೃತಿ ಸನೋನ್ ವಿರುದ್ಧ ಎಫ್ಐಆರ್

ಪ್ರಭಾಸ್, ಕೃತಿ ಸನೋನ್ ವಿರುದ್ಧ ಎಫ್ಐಆರ್

ಬೆಂಗಳೂರು: ಬಾಲಿವುಡ್ ನಟಿ ಕೃತಿ ಸನೋನ್, ಆದಿಪುರುಷ್ ಸಿನಿಮಾದ ಸಹನಟ ಪ್ರಭಾಸ್ ಮೇಲೆ ಎಫ್‌ಐಆರ್ ದಾಖಲಾಗಿದೆ.

‘ಆದಿಪುರುಷ’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಸಂಬಂಧ ಪ್ರಭಾಸ್, ಕೃತಿ ಸನೋನ್ ಹಾಗೂ ನಿರ್ಮಾಪಕ, ನಿರ್ದೇಶಕ ಓಂ ರಾವುತ್ ವಿರುದ್ಧ ದೂರು ದಾಖಲಾಗಿದೆ

ಹೊಸ ಪೋಸ್ಟರ್ ನಲ್ಲಿ ರಾಮಚರಿತಮಾನಸದಲ್ಲಿ ಕಂಡು ಬರುವ ವೇಷಭೂಷಣಕ್ಕೆ ವಿರುದ್ಧವಾದ ವೇಷದಲ್ಲಿ ರಾಮನನ್ನು ಚಿತ್ರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಚಿತ್ರದ ಹೊಸ ಪೋಸ್ಟರ್ ನಲ್ಲಿ ಹಿಂದೂ ಪುರಾಣದ ಪಾತ್ರವನ್ನು ಅನುಚಿತವಾಗಿ ಪ್ರದರ್ಶಿಸುವ ಮೂಲಕ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆದಿಪುರುಷ ನಿರ್ಮಾಪಕ, ನಿರ್ದೇಶಕ ಓಂ ರಾವುತ್ ಮತ್ತು ಚಿತ್ರದ ಪಾತ್ರವರ್ಗದ ವಿರುದ್ಧ ದೂರು ದಾಖಲಿಸಲಾಗಿದೆ.

ಹಿಂದೂ ಧರ್ಮದಲ್ಲಿ ಜನಿವಾರ ಎಂಬುದು ಮುಖ್ಯ ಪಾತ್ರ ವಹಿಸಿದ್ದು, ಪೋಸ್ಟರ್ ನಲ್ಲಿ ಕಾಣುವ ಪಾತ್ರಗಳು ಜನಿವಾರ ಹಾಕಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

6೦೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವು ಜೂನ್ 16ರಂದು ಬಿಡುಗಡೆಗೊಳ್ಳಲಾಗಿದೆ. ಈ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದ್ದು, ಬಾಲಿವುಡ್ ನಟ, ನಟಿಯರಾದ ಸೈಫ್ ಅಲಿಖಾನ್, ಅಮಿತಾಬ್ ಬಚ್ಚನ್, ಕಾಜೋಲ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.

ಹೆಚ್ಚಿನ ಸುದ್ದಿ