Monday, March 2, 2026
Homeಟಾಪ್ ನ್ಯೂಸ್ಪ್ಲಾಸ್ಟಿಕ್ ಪ್ಯಾಕಿಂಗ್ ಕವರ್ ಗೋಡೌನ್​​​​​ಗೆ ಬೆಂಕಿ

ಪ್ಲಾಸ್ಟಿಕ್ ಪ್ಯಾಕಿಂಗ್ ಕವರ್ ಗೋಡೌನ್​​​​​ಗೆ ಬೆಂಕಿ

ಬೆಂಗಳೂರು: ಪ್ಲಾಸ್ಟಿಕ್ ಪ್ಯಾಕಿಂಗ್ ಕವರ್ ತಯಾರಿಕ ಗೋಡೌನ್​​​​​ಗೆ ಬೆಂಕಿ ತಗುಲಿ ಅಧಿಕ ಮೌಲ್ಯದ ಯಂತ್ರಗಳು ಸುಟ್ಟುಕರಕಲಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ವೃಷಭಾವತಿ ನಗರದಲ್ಲಿ ಈ ಘಟನೆ ನಡೆದಿದೆ. ಯೋಗಿ ಪ್ಲೆಕ್ಸಿಬಲ್ ಪ್ಯಾಕೇಜಿಂಗ್ ಕಂಪನಿಯಲ್ಲಿ ಈ ಅವಘಡ ಸಂಭವಿಸಿದ್ದು, ಎರಡು ಅಂತಸ್ತಿನ ಕಟ್ಟಡದ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿಯಾಗಿಲ್ಲ.

ಸ್ಥಳಕ್ಕೆ ಮೂರು ಅಗ್ನಿಶಾಮಕ ದಳ ವಾಹನ ಬಂದಿದ್ದು, ಗೋಡೋನ್ ಕ್ಲೋಸ್ ಆದ ಹಿನ್ನಲೆ ಕಿಟಕಿ ಮೂಲಕ ಬೆಂಕಿ ನಂದಿಸುವ ಕಾರ್ಯ ಮಾಡಲಾಗಿದೆ. ಸ್ಥಳಕ್ಕಾಗಮಿಸಿದ ಕಾಮಾಕ್ಷಿ ಪ‍ಾಳ್ಯ ಪೊಲೀಸರು ಪರಿಶೀಲನೆ ನಡೆಸೊದ್ದಾರೆ.

ಹೆಚ್ಚಿನ ಸುದ್ದಿ