Monday, October 13, 2025
Homeಟಾಪ್ ನ್ಯೂಸ್ಕೊಳದಲ್ಲಿ ಮುಳುಗಿ ಐವರು ಸಾವು

ಕೊಳದಲ್ಲಿ ಮುಳುಗಿ ಐವರು ಸಾವು

ಚೆನ್ನೈ: ಇಲ್ಲಿನ ದೇವಾಲಯವೊಂದರ ಕೊಳದಲ್ಲಿ ಮುಳುಗಿ ಐವರು ಯುವಕರು ಮೃತಪಟ್ಟಿದ್ದಾರೆ.

ದೇವಸ್ಥಾನದಲ್ಲಿ ಪುರೋಹಿತರು, ಸ್ವಯಂಸೇವಕರು ಹಾಗೂ ಭಕ್ತರು ಸೇರಿ ಕೊಳದಲ್ಲಿ ಧಾರ್ಮಿಕ ವಿಧಾನದ ಭಾಗವಾಗಿ ವೃತ್ತವನ್ನು ರಚಿಸಿದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತರು 18 ರಿಂದ 25 ವರ್ಷದೊಳಗಿನವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತ ದೇಹಗಳನ್ನು ವರಣೋತ್ತರ ಪರೀಕ್ಷೆ ನಡೆಸಿ ಅವರ ಕುಟುಂಬದವರಿಗೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮೃತರ ಕುಟುಂಬದವರಿಗೆ ಪರಿಹಾರ ಘೋಷಣೆ ಮಾಡಿದ್ದಾರೆ. ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಕೊಂಡಿದ್ದು ತನಿಖೆ ಮಾಡುತ್ತಿದ್ದಾರೆ.

ಹೆಚ್ಚಿನ ಸುದ್ದಿ