ಉತ್ತರಪ್ರದೇಶದ ಝಾನ್ಸಿಯಲ್ಲಿ ಗ್ಯಾಂಗ್‌ಸ್ಟರ್, ಮಾಜಿ ಸಂಸದ ಅತೀಕ್ ಅಹ್ಮದ್, ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ರನ್ನು ಹತ್ಯೆ ಮಾಡಲಾಗಿದೆ.
ಪ್ರಯಾಗ್‌ರಾಜ್ ಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವಾಗ ಗುಂಡು ಹಾರಿಸಿ ಕೊಲ್ಲಲಾಗಿದೆ. ಇಬ್ಬರು ಶೂಟರ್‌ಗಳನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ.
ಪುತ್ರ ಅಸದ್ ಅಹ್ಮದ್ ಅವರ ಅಂತ್ಯಕ್ರಿಯೆಯ ಕೆಲವೇ ಗಂಟೆಗಳಲ್ಲಿ ಅತೀಕ್ ಅಹ್ಮದ್‌ರನ್ನು ಹತ್ಯೆಗೈಯಲಾಗಿದೆ.
ಅತೀಕ್ ಶುಕ್ರವಾರ ತನ್ನ ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮ್ಯಾಜಿಸ್ಟ್ರೇಟ್‌ಗೆ ಅನುಮತಿ ಕೋರಿದ್ದರು. ಆದರೆ, ಅವರಿಗೆ ಅವಕಾಶ ಸಿಕ್ಕಿರಲಿಲ್ಲ.