Monday, March 2, 2026
HomeUncategorizedರಾಮನವಮಿ ಶೋಭಾಯಾತ್ರೆಯಲ್ಲಿ ಗೋಡ್ಸೆ ಫೋಟೋ ಪ್ರತ್ಯಕ್ಷ!

ರಾಮನವಮಿ ಶೋಭಾಯಾತ್ರೆಯಲ್ಲಿ ಗೋಡ್ಸೆ ಫೋಟೋ ಪ್ರತ್ಯಕ್ಷ!

ಹೈದ್ರಾಬಾದ್: ಶ್ರೀರಾಮನವಮಿ ಪ್ರಯುಕ್ತ ಆಯೋಜಿಸಲಾಗಿದ್ದ ಶೋಭಾ ಯಾತ್ರೆ ಮೆರವಣಿಗೆಯಲ್ಲಿ ನಾಥೂರಾಂ ಗೋಡ್ಸೆ ಭಾವಚಿತ್ರವನ್ನು ಹೊತ್ತು ಸಾಗುತ್ತಿರುವುದು ಕಂಡುಬಂದಿದೆ. ಬಿಜೆಪಿ ಉಚ್ಛಾಟಿತ ಶಾಸಕ ರಾಜಾ ಸಿಂಗ್ ನೇತೃತ್ವದಲ್ಲಿ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಸಮರ್ಥನೆ ನೀಡಿರುವ ರಾಜಾ ಸಿಂಗ್, ಅದು ಪ್ರತಿಯೊಬ್ಬರ ಸಿದ್ದಾಂತವನ್ನು ಅವಲಂಬಿಸಿದೆ. ಶೋಭಾಯಾತ್ರೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಶಿವಾಜಿ, ಸಾವರ್ಕರ್, ಭಗತ್ ಸಿಂಗ್ ಫೋಟೋಗಳನ್ನೂ ಸಹ ತರಲಾಗಿತ್ತು. ಅದೇ ರೀತಿ ಯಾರೋ ನಾಥೂರಾಂ ಗೋಡ್ಸೆ ಭಾವಚಿತ್ರ ತಂದಿರಬಹುದು ಎಂದಿದ್ದಾರೆ.
ಮುಸ್ಲಿಂ ಸಮುದಾಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ರಾಜಾಸಿಂಗ್ ರನ್ನು ಕಳೆದ ವರ್ಷ ಬಂಧಿಸಲಾಗಿತ್ತು. ಬಳಿಕ ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಗಿತ್ತು.

ಹೆಚ್ಚಿನ ಸುದ್ದಿ