Monday, July 7, 2025
Homeಚುನಾವಣೆ 2023ಮಾಜಿ ಡಿಸಿಎಂ ಪರಮೇಶ್ವರ್ ಬಳಿ ಚಿನ್ನ ಇಲ್ವಂತೆ..!

ಮಾಜಿ ಡಿಸಿಎಂ ಪರಮೇಶ್ವರ್ ಬಳಿ ಚಿನ್ನ ಇಲ್ವಂತೆ..!

ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಡಿಸಿಎಂ ರಾಜಿ ಪರಮೇಶ್ವರ್ ಅವರ ಆಸ್ತ ವಿವರ ನಿಜಕ್ಕೂ‌ ಅಚ್ಚರಿ ಕೂಡಿಸಿದೆ. ನಾಮಪತ್ರ ಸಲ್ಲಿಕೆ‌ ವೇಳೆ‌ ತಮ್ಮ ಚರಾಸ್ತಿ ಸ್ಥಿರಾಸ್ತಿ ವಿವರ ನೀಡಿದ ಅವರು ತಮ್ಮಲ್ಲಿ ನಾಲ್ಕು ಕೋಟಿ ಮೌಲ್ಯದ ಚರಾಸ್ತಿ, 2.43 ಕೋಟಿ ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ತಿಳಿಸಿದ್ದಾರೆ.
ಆದರೆ ಅಚ್ಚರಿಯ ವಿಚಾರವೆಂದರೆ ಅವರ ಬಳಿ ಚಿನ್ನವೇ ಇಲ್ಲವಂತೆ. ಇರುವುದು ಕೇವಲ 25,000 ಮೌಲ್ಯದ ಬೆಳ್ಳಿ ಮಾತ್ರ.ಜೊತೆಗೆ ಟಾಟಾ ಸಫಾರಿ, ಸ್ಕೋಡ, ಆಡಿ ಕಾರು ಸೇರಿದಂತೆ ಒಟ್ಟು 1.23 ಕೋಟಿ ರೂ ಮೌಲ್ಯದ ಕಾರುಗಳಿವೆ.
ಪತ್ನಿ ಕನ್ನಿಕಾ ಪರಮೇಶ್ವರಿ ಹೆಸರಿನಲ್ಲಿ 2.43 ಕೋಟಿ ಸ್ಥಿರಾಸ್ತಿ, 5.63 ಕೋಟಿ ರೂ ಮೌಲ್ಯದ ಚರಾಸ್ತಿ ಮತ್ತು 1.57 ಕೋಟಿ ಮೌಲ್ಯದ ಚಿನ್ನಾಭರಣ, 19.74 ಮೌಲ್ಯದ ಬೆಳ್ಳಿ ಇದೆ ಎಂದು ಚುನಾವಣಾ ಆಯೋಗಕ್ಕೆ ಲೆಕ್ಕ ಸಲ್ಲಿಸಿದ್ದು, ಎಲ್ಲೆಡೆ ಇದು ವೈರಲ್ ಆಗಿದೆ.

ಹೆಚ್ಚಿನ ಸುದ್ದಿ