Tuesday, March 3, 2026
Homeರಾಜಕೀಯಮಾನಸಿಕವಾಗಿ ಬಿಜೆಪಿ ನನಗೆ ಒಗ್ಗಲ್ಲ: ಗುಬ್ಬಿ ಶ್ರೀನಿವಾಸ್

ಮಾನಸಿಕವಾಗಿ ಬಿಜೆಪಿ ನನಗೆ ಒಗ್ಗಲ್ಲ: ಗುಬ್ಬಿ ಶ್ರೀನಿವಾಸ್

ಬೆಂಗಳೂರು: ಜೆಡಿಎಸ್ ತೊರೆದ ಗುಬ್ಬಿ ಮಾಜಿ ಶಾಸಕ ಶ್ರೀನಿವಾಸ್ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಇಂದು ಕಾಂಗ್ರೆಸ್ ಸೇರಿದ ಮುಖಂಡ ಗುಬ್ಬಿ ಶ್ರೀನಿವಾಸ್ ಮಾತನಾಡಿ, ವಿನಾಕಾರಣ ನನ್ನ ಮೇಲೆ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪ ಹೊರಿಸಲಾಯಿತು. ಅಪಮಾನಕರವಾಗಿ ನಡೆಸಿಕೊಳ್ಳಲಾಯಿತು. ಸ್ವಾಭಿಮಾನವನ್ನು ಉಳಿಸಿಕೊಳ್ಳುವ ಸಲುವಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ಈ ಮೂಲಕ ನನ್ನನ್ನು ಕಾಂಗ್ರೆಸ್‍ಗೆ ಸೇರುವಂತೆ ಮಾಡಿದ ಕುಮಾರಸ್ವಾಮಿಯವರಿಗೆ ಧನ್ಯವಾದಗಳು ಎಂದು ವ್ಯಂಗ್ಯದಿಂದ ನುಡಿದರು.

ಇದಕ್ಕೂ ಮುನ್ನ ತುಕೂರಿನಲ್ಲಿ ಮಾತನಾಡಿದ ಶ್ರೀನಿವಾಸ್ ಮಾನಸಿಕವಾಗಿ ನನಗೆ ಬಿಜೆಪಿ ಒಗ್ಗಲ್ಲ, ಹಾಗಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ಬಿಜೆಪಿಯವರು ಕೋಮುಗಲಭೆ ಸೃಷ್ಟಿಸಿ ಅಧಿಕಾರ ಪಡೆಯುತ್ತಾರೆ ಎಂದು ತುಮಕೂರಿನಲ್ಲಿ ಗುಬ್ಬಿ ಮಾಜಿ ಶಾಸಕ ಎಸ್​.ಆರ್​.ಶ್ರೀನಿವಾಸ್ ಹೇಳಿದ್ರು.

ಲೋಕಸಭೆ ಟಿಕೆಟ್​ ತಪ್ಪಲು ಡಿಕೆಶಿ​ ಕಾರಣ ಎಂಬ ಹೇಳಿಕೆ ವಿಚಾರಕ್ಕೆ, ಮಾಜಿ ಸಂಸದ ಮುದ್ದಹನುಮೇಗೌಡ ಹೇಳಿಕೆಗೆ ಶ್ರೀನಿವಾಸ್ ಟಾಂಗ್ ಕೊಟ್ಟಿದ್ದಾರೆ. ಯಾರು ಯಾರಿಗೂ ಮೋಸ ಮಾಡುವುದಕ್ಕೆ ಆಗಲ್ಲ. ಆ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು. ದೇವೇಗೌಡರು ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದರು. ಆಗಿನ ಪರಿಸ್ಥಿತಿಯಲ್ಲಿ ದೇವೇಗೌಡರಿಗೆ ಟಿಕೆಟ್ ತಪ್ಪಿಸಲು ಯಾರಿದ್ರು? ಪಕ್ಷ ಬಿಟ್ಟ ಮೇಲೆ ಇವರ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದು ತುಮಕೂರಿನಲ್ಲಿ ಗುಬ್ಬಿ ಮಾಜಿ ಶಾಸಕ ಎಸ್​.ಆರ್​.ಶ್ರೀನಿವಾಸ್ ಹೇಳಿದ್ರು

ಇಂದು ಮೂಡಿಗೆರೆಯ ಮಾಜಿ ಪುರಸಭೆ ಅಧ್ಯಕ್ಷ ಹಾಲಪ್ಪ, ಮಂಡ್ಯ ಯುವ ಜೆಡಿಎಸ್ ಮಾಜಿ ಅಧ್ಯಕ್ಷ ಸತ್ಯಾನಂದ, ಸುಲ್ತಾನ್ ಸೇರಿದಂತೆ ಜೆಡಿಎಸ್-ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಹಲವು ಮುಖಂಡರನ್ನು ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಲಾಯಿತು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್. ಸಲೀಂ ಅಹ್ಮದ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ಹೆಚ್ಚಿನ ಸುದ್ದಿ