Monday, October 13, 2025
Homeಬೆಂಗಳೂರುಟಿಕೆಟ್ ಗಾಗಿ ಅರೆಬೆತ್ತಲೆ ಪ್ರತಿಭಟನೆ - ಸಿದ್ದು ಕಾರಿಗೆ ಅಡ್ಡ ಮಲಗಿದ ಕಾರ್ಯಕರ್ತರು

ಟಿಕೆಟ್ ಗಾಗಿ ಅರೆಬೆತ್ತಲೆ ಪ್ರತಿಭಟನೆ – ಸಿದ್ದು ಕಾರಿಗೆ ಅಡ್ಡ ಮಲಗಿದ ಕಾರ್ಯಕರ್ತರು

ವಿಧಾನಸಭಾ ಚುನಾವಣೆಯ ಉಮೇದುವಾರಿಕೆ ಟಿಕೆಟ್‍ಗಾಗಿ ಬೇಡಿಕೆ ಸಲ್ಲಿಸಿ ಕಾಂಗ್ರೆಸ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನೆಮುಂದೆ ಇಂದು ಹಲವು ಕ್ಷೇತ್ರಗಳ ಕಾರ್ಯಕರ್ತರು ಅರೆಬೆತ್ತಲೆ ಮೆರವಣಿಗೆ ನಡೆಸಿದ್ದಾರೆ. ಜೊತೆಗೆ ಸಿದ್ದರಾಮಯ್ಯನವರ ಕಾರಿಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ.
ಮೊಳಕಾಲ್ಮೂರು ಕ್ಷೇತ್ರದ ಕಾರ್ಯಕರ್ತರು ಯೋಗೇಶ್ ಬಾಬು ಅವರಿಗೆ ಟಿಕೆಟ್ ನೀಡಬೇಕೆಂದು ಸಿದ್ದರಾಮಯ್ಯ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಕೂಡ್ಲಿಗೆ ಶಾಸಕ ಎನ್‍ವೈ ಗೋಪಾಲಕೃಷ್ಣ ಕಾಂಗ್ರೆಸ್‍ಗೆ ಬರುತ್ತಿದ್ದು, ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಕೆಲಸ ಮಾಡುತ್ತಿರುವ ಯೋಗೇಶ್ ಬಾಬುರಿಗೆ ಟಿಕೆಟ್ ನೀಡಬೇಕೆಂದು ಯೋಗೇಶ್ ಗೌಡ ಹಿಂಬಾಲಕರು ಆಗ್ರಹಿಸಿದರು.
ದಾಸರಹಳ್ಳಿಯಲ್ಲಿ ಧನಂಜಯ್ ಅವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿ, ಟಿಕೆಟ್ ಆಕಾಂಕ್ಷಿಗಳಾದ ನಾಗಲಕ್ಷ್ಮಿ ಚೌಧರಿ ಹಾಗೂ ಪಿಎನ್ ಕೃಷ್ಣಮೂರ್ತಿ ಬೆಂಬಲಿಗರು ಪ್ರತಿಭಟನೆ ನಡೆಸಿದರು.

ಹೆಚ್ಚಿನ ಸುದ್ದಿ