Sunday, October 12, 2025
Homeಚುನಾವಣೆ 2023ಸ್ವರೂಪ್‌ ಗೆಲುವಿಗೆ ಟೊಂಕ ಕಟ್ಟಿದ ದೇವೇಗೌಡ ಕುಟುಂಬ

ಸ್ವರೂಪ್‌ ಗೆಲುವಿಗೆ ಟೊಂಕ ಕಟ್ಟಿದ ದೇವೇಗೌಡ ಕುಟುಂಬ

ಹಾಸನ: ಜೆಡಿಎಸ್‌ ಅಭ್ಯರ್ಥಿ ಸ್ವರೂಪ್‌ ಗೆ ಗೆಲುವಿಗೆ ದೇವೇಗೌಡರ ಕುಟುಂಬವೇ ಟೊಂಕ ಕಟ್ಟಿ ನಿಂತಿದೆ. ತೆರೆದ ವಾಹನದಲ್ಲಿ ದೇವೇಗೌಡ ಅವರು ಹೆಚ್.ಪಿ.ಸ್ವರೂಪ್ ಪರ ಚುನಾವಣಾ ಪ್ರಚಾರ ನಡೆಸಿದ್ದಾರೆ.

ಹಾಸನ ಜಿಲ್ಲೆಯ ಅಭಿವೃದ್ಧಿಗೆ ಪ್ರೀತಂಗೌಡ ಮಾರಕ. ಬಿಜೆಪಿ ಅಭ್ಯರ್ಥಿ ಪ್ರೀತಂಗೌಡನನ್ನು ಸೋಲಿಸಿಯೇ ತೀರಬೇಕು ಎಂದು ಅವರು ಕರೆ ನೀಡಿದ್ದಾರೆ.

ಇನ್ನು, ರೇವಣ್ಣ ಕುಟುಂಬ ಕೂಡಾ ಸ್ವರೂಪ್‌ ಗೆ ಬೆಂಬಲ ಘೋಷಿಸಿದೆ. “ನಾನು ಹಾಸನ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದು ಸತ್ಯ. ಅಭ್ಯರ್ಥಿ ಘೋಷಣೆಯಾದ ನಂತರ ಸ್ವರೂಪ್ ರನ್ನು​​ ಬೆಂಬಲಿಸಿದ್ದೇನೆ” ಎಂದಿ ಭವಾನಿ ರೇವಣ್ಣ ಹೇಳಿದ್ದಾರೆ.

ನನಗೆ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರವಿಲ್ಲ. ಯಾವತ್ತೂ ನಮ್ಮ ಕುಟುಂಬದಲ್ಲಿ ಬಿರುಕು ಮೂಡಲು ಸಾಧ್ಯವಿಲ್ಲ. ದೇವೇಗೌಡರ ಕುಟುಂಬ ಒಗ್ಗಟ್ಟಿನಿಂದ ಇದೆ. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಗೆಲ್ಲಬೇಕು ಎಂದು ಅವರು ಹೇಳಿದ್ದಾರೆ.

ಹಾಸನದ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನ ಜೆಡಿಎಸ್ ಕಾರ್ಯಕರ್ತರು, ಬೆಂಬಲಿಗರು ಪಾಲ್ಗೊಂಡಿದ್ರು

 

 

ಹೆಚ್ಚಿನ ಸುದ್ದಿ