ಹುಬ್ಬಳ್ಳಿ: ಬೇರೆ ಬೇರೆ ಪಕ್ಷಗಳು ನೂರಾರು ಸೀಟ್‌ಗಳ ಗೊಂದಲದಲ್ಲಿ ಸಿಲುಕಿದ್ರೆ ನನಗೆ ಈ ಹಾಸನ ಸೀಟ್‌ದೇ ದೊಡ್ಡ ತಲೆನೋವಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಹೇಳಿದ್ರು
ಭವಾನಿಯವರು ಸ್ಪರ್ಧೆ ಮಾಡಿದರೆ ಹಾಸನದಲ್ಲಿ ಗೆಲ್ಲೋದಿಲ್ಲ. ಹಾಸನದಲ್ಲಿ ಸದೃಢ ಕಾರ್ಯಕರ್ತರಿದ್ದಾರೆ, ಅವರ ನಿರ್ಧಾರ ಅಂತಿಮ. ನಾನು ಮೊದಲಿಂದಲೂ ಹಾಸನದ ಟಿಕೆಟ್ ಸಾಮಾನ್ಯ ಕಾರ್ಯಕರ್ತರಿಗೆ ನೀಡುವ ಕ್ಲೂ ನೀಡಿದ್ದೆ. ಆದ್ರೆ ಈಗಲೂ ಹಾಸನ ಸೀಟ್ ಗೊಂದಲ ಬಗೆಹರಿದಿಲ್ಲ.. ನಾನು ಹಗಲು ರಾತ್ರಿ ಪಕ್ಷ ಕಟ್ಟಿ, ಅಧಿಕಾರಕ್ಕೆ ತರಲು ನಾನು ಹಗಲು ರಾತ್ರಿ ಓಡಾಡುತ್ತಿದ್ರೆ.. ನ್ನ ಕುಟುಂಬದವರು ಹಾಸನ ಕ್ಷೇತ್ರದ ಟಿಕೆಟ್‌ಗಾಗಿ ಚಿಂತೆ ಮಾಡುತ್ತಿದ್ದಾರೆ ಎಂದು ರೇವಣ್ಣ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು.
ಇನ್ನು ರೇವಣ್ಣ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ಕೇಳಿರುವ ವಿಚಾರ ನನ್ನ ಗಮನಕ್ಕೇ ಬಂದಿಲ್ಲ ಎಂದ ಕುಮಾರಸ್ವಾಮಿ, ಹಾಸನದಲ್ಲಿರುವ ಕೆಲ ಶಕುನಿಗಳು ನಮ್ಮ ಕುಟುಂಬ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಮಹಾಭಾರತ ಕಾಲದಿಂದ ನಡೆದು ಬಂದಿದ್ದೆ ಈಗಲೂ ನಡೆಯುತ್ತಿದೆ. ರೇವಣ್ಣ ಕುಟುಂಬಕ್ಕೆ ತಲೆ ತುಂಬಿ ದಾರಿ ತಪ್ಪಿಸುತ್ತಿದ್ದಾರೆ. ಆದರೆ ಕುಟುಂಬದವರಿಗೆ ಟಿಕೆಟ್ ನೀಡಿ ಮಾಧ್ಯಮಗಳಿಗೆ ಆಹಾರ ಆಗಲು ತಯಾರಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ರು
