ಕನ್ನಡಿಗರಿಗೆ ಸಂತಸದ ವಿಚಾರ.ಯಾಕಂದ್ರೆ ಕಾನೂನು ಈಹ ಮತ್ತಷ್ಟು ಜನರಿಗೆ ಸಮೀಪವಾಗಲಿದೆ.ಇನ್ನು ಮುಂದೆ ಹೈಕೋರ್ಟ್, ಸುಪ್ರಿಂ ಕೋರ್ಟ್‌ನ ತೀರ್ಪುಗಳು ಕನ್ನಡದಲ್ಲಿಯೇ ಲಭ್ಯವಾಗಲಿವೆ.
ಕರ್ನಾಟಕ ಹೈಕೋರ್ಟ್ ನೀಡುವ ತೀರ್ಪುಗಳು ಇನ್ನು ಮುಂದೆ ಕನ್ನಡ ಭಾಷೆಯಲ್ಲೂ ಲಭ್ಯವಾಗಲಿವೆ. ಅದಕ್ಕಾಗಿಯೇ ಹೈಕೋರ್ಟ್ ಕನ್ನಡದ ತೀರ್ಪುಗಳ ವೆಬ್ ಪುಟವನ್ನು ತೆರೆದಿದೆ.
ಕೇರಳ, ಗುಜರಾತ್ ಮತ್ತು ಮಹಾರಾಷ್ಟ್ರ ಹೈಕೋರ್ಟ್‌ಗಳು ಈಗಾಗಲೇ ಸ್ಥಳೀಯ ಭಾಷೆಯಲ್ಲಿ ತೀರ್ಪುಗಳನ್ನು ಪ್ರಕಟಿಸಲು ಆರಂಭಿಸಿದೆ,ಹೀಗಾಗಿ ಕರ್ನಾಟಕ ಹೈಕೋರ್ಟ್‌ನಿಂದಲೂ ತೀರ್ಪುಗಳನ್ನು ಕನ್ನಡದಲ್ಲಿ ಪ್ರಕಟಿಸಿ, ಅವುಗಳನ್ನು ವೆಬ್ ಪುಟದಲ್ಲಿ ಹಾಕಿದೆ. ಕನ್ನಡೀಕರಿಸಿದ ತೀರ್ಪುಗಳ ವೆಬ್ ಪೇಜ್ ಅನ್ನು ನ್ಯಾ.ಪಿ.ಬಿ ವರ್ಲೆ ಅನಾವರಣಗೊಳಿಸಿದರು.
ವೆಬ್‌ಪೇಜ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ತೀರ್ಪುಗಳು ಲಭ್ಯ. ಜನಸಾಮಾನ್ಯರು ಮತ್ತು ದಾವೆದಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್‌ನ ಒಟ್ಟು 197 ಪ್ರಮುಖ ತೀರ್ಪುಗಳನ್ನು ಕನ್ನಡೀಕರಿಸಿ, ಪ್ರಕಟಿಸುವ ಮೂಲಕ ಮಹತ್ವದ ಕಾರ್ಯ ಮಾಡಿದೆ.
ಮೊದಲ ಹಂತದಲ್ಲಿ ವೆಬ್‌ಪೇಜ್‌ನಲ್ಲಿ ಕರ್ನಾಟಕ ಹೈಕೋರ್ಟ್‌ನ 169 ಮತ್ತು ಸುಪ್ರೀಂಕೋರ್ಟ್‌ನ 28 ಕನ್ನಡೀಕರಿಸಿದ ತೀರ್ಪುಗಳನ್ನು ಪ್ರಕಟಿಸಲಾಗಿದೆ.