ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ಮಾಜಿ ಸಿಎಂ ಬಿಎಸ್‌ವೈ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಹಿಂದುತ್ವವಾದಿಗಳು ಶುರು ಮಾಡಿರುವ ಹಿಜಾಬ್ ಹಾಗೂ ಹಲಾಲ್ ಸುತ್ತಲಿನ ವಿವಾದಗಳು ಅನಗತ್ಯವಾಗುತ್ತು ಎಂದು ಅವರು ಹೇಳಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಿಎಸ್‌ವೈ, “”ಹಿಂದೂಗಳು ಮತ್ತು ಮುಸಲ್ಮಾನರು ಸಹೋದರ, ಸಹೋದರಿಯರಂತೆ ಬಾಳಬೇಕು. ಆರಂಭದಿಂದಲೂ ನನ್ನ ನಿಲುವು ಇದೇ ಆಗಿತ್ತು. ಇತ್ತೀಚೆಗೆ ರಾಜ್ಯದಲ್ಲಿ ಸಾಕಷ್ಟು ಕೋಲಾಹಲ ಸೃಷ್ಟಿಸಿದ್ದ ಹಿಜಾಬ್, ಹಲಾಲ್ ಸುತ್ತ ವಿವಾದಗಳು ಅನಗತ್ಯವಾಗಿತ್ತು,” ಹೇಳಿದ್ದಾರೆ.
ಹಿಜಾಬ್, ಹಲಾಲ್ ವಿವಾದಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ ಅವರು, ಆಹ್ವಾನವಿದ್ದರೂ ಚರ್ಚ್ ಕಾರ್ಯಕ್ರಮಗಳಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಭಾಗವಹಿಸದೆ ಇರುವುದನ್ನು ತಪ್ಪು ಎಂದಿದ್ದಾರೆ.
ಇಂತಹ ಕಾರ್ಯಕ್ರಮಗಳಿಗೆ ಹೋಗಬೇಕು, ತಾನು ಕೈಸ್ತರ ಮತ್ತು ಮುಸಲ್ಮಾನರ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ, ಬೊಮ್ಮಾಯಿ ಕೂಡ ಹೋಗುತ್ತಿದ್ದರು. ಅವರಿಗೆ ಆಹ್ವಾನ ನೀಡಲಾದ ಸ್ಥಳಗಳಿಗೆ ಅವರು ಹೋಗಬೇಕಿತ್ತು. ಇಂತಹ ಕಾರ್ಯಕ್ರಮಗಳಿಗೆ ಮಹತ್ವ ನೀಡಬೇಕು, ಅವರು ಅಂತಹ ಕಾರ್ಯಕ್ರಮಗಳಿಗೆ ಹೋಗಬೇಕು,” ಎಂದು ಯಡಿಯೂರಪ್ಪ ಹೇಳಿದ್ದಾರೆ.
