ರಾಯಚೂರು: ರಾಜ್ಯ ರಾಜಕಾರಣ ಬಿರುಸುಗೊಂಡಿದೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಅಭಯರ್ಥಿಗಳು ನಾಮಪತ್ರ ಸಲ್ಲಿಕೆ ಪ್ರಾರಂಭಿಸಿದ್ದಾರೆ.
ಅದರಂತೆ, ಒಂದೇ ಕ್ಷೇತ್ರಕ್ಕೆ ಗಂಡ-ಹೆಂಡತಿ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿರುವ ವಿಶೇಷ ಸಂದರ್ಭ ಸೃಷ್ಟಿಯಾಗಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಥಾಪಿಸಿದ ಕೆಕೆಆರ್‌ಪಿ ಪಕ್ಷದ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ನೆಕ್ಕಂಟಿ ಎಂಬವರು ನಾಮಪತ್ರ ಸಲ್ಲಿಸಿದ್ದು, ಅವರಿಗೆ ಪ್ರತಿಸ್ಪರ್ಧಿಯಾಗಿ ಅವರ ಪತ್ನಿ ಎನ್ ರಮ್ಯಾ ಸಹ ನಾಮ ಪತ್ರ ಸಲ್ಲಿಸಿದ್ದಾರೆ. ರಮ್ಯಾ ಪಕ್ಷೇತರಳಾಗಿ ಸ್ಪರ್ಧಿಸುತ್ತಿದ್ದು, ಗಂಡ-ಹೆಂಡತಿ ಸ್ಪರ್ಧೆಯ ಈ ಕ್ಷೇತ್ರ ಕುತೂಹಲ ಹುಟ್ಟಿಸಿದೆ.
ವಿಶೇಷ ಅಂದ್ರೆ ಈ ಗಂಡ ಹೆಂಡತಿ ಇಬ್ಬರೂ ಜೋಡಿಯಾಗಿ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಮೊದಲು ಗಂಡ ಮಲ್ಲಿಕಾರ್ಜುನ ನೆಕ್ಕಂಟಿ ಸಿಂಧನೂರು ತಹಶಿಲ್ದಾರರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರೆ, ಬಳಿಕ ಪತ್ನಿ ಎನ್ ರಮ್ಯಾ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.