Monday, March 2, 2026
Homeಚುನಾವಣೆ 2023ಯಾರು ಬೇಕಾದರೂ ಸಿಎಂ ಆಗಲಿ, ನನಗೆ ಬೇಡ: ಖರ್ಗೆ

ಯಾರು ಬೇಕಾದರೂ ಸಿಎಂ ಆಗಲಿ, ನನಗೆ ಬೇಡ: ಖರ್ಗೆ

ಕೋಲಾರ: ರಾಜ್ಯದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಲಿ, ಆ ಪಟ್ಟ ನನಗೆ ಬೇಡ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಖರ್ಗೆ, “ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಅಷ್ಟೆ, ಸಿಎಂ ಸ್ಥಾನಕ್ಕೆ ಯಾರು ಬೇಕಾದರೂ ಬರಲಿ, ನನಗೆ ಬೇಡ” ಎಂದು ಹೇಳಿದ್ದಾರೆ. 

 ಸಿಎಂ ಯಾರಾಗಬೇಕೆಂದು ನಾಯಕರು ತಲೆ ಕೆಡಿಸಿಕೊಳ್ಳಬೇಡಿ. ರಾಜ್ಯದ ಜನರ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಿ. ಪಕ್ಷಕ್ಕೆ ಬಹುಮತ ಬಂದಾಗ ಸಿಎಂ ಯಾರಾಗಬೇಕೆಂದು ಶಾಸಕರು ನಿರ್ಧರಿಸುತ್ತಾರೆ ಎಂದು ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್‌ ಸಿಎಂ ಆಕಾಂಕ್ಷಿಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಖರ್ಗೆ ತನಗೆ ಸಿಎಂ ಪಟ್ಟ ಬೇಡ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ.

ಹೆಚ್ಚಿನ ಸುದ್ದಿ