Monday, March 2, 2026
Homeಟಾಪ್ ನ್ಯೂಸ್ತಾತನಂತೆ ಲಾ ಓದಿ ರಾಜಕೀಯಕ್ಕೆ ಬರುತ್ತೇನೆ: ಸಿದ್ದರಾಮಯ್ಯ ಮೊಮ್ಮಗ

ತಾತನಂತೆ ಲಾ ಓದಿ ರಾಜಕೀಯಕ್ಕೆ ಬರುತ್ತೇನೆ: ಸಿದ್ದರಾಮಯ್ಯ ಮೊಮ್ಮಗ

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಮೊಮ್ಮಗ ಧವನ್ ರಾಕೇಶ್ ರಾಜಕೀಯ ಬರುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ನಾನು ದ್ವಿತೀಯ ಪಿಯುಸಿ ಓದುತ್ತಿದ್ದು, ಮುಂದೆ ಕಾನೂನು ಪದವಿ ಪಡೆದು ತಾತನಂತೆಯೇ ರಾಜಕೀಯಕ್ಕೆ ಬರುವುದಾಗಿ ಧವನ್‌ ಹೇಳಿದ್ದಾರೆ.

ನಮ್ಮಪ್ಪ ರಾಕೇಶ್ ಅವರ ರಕ್ತವೇ ನಂದು. ನನಗೆ ರಾಜಕೀಯದಲ್ಲಿ ತುಂಬಾ ಆಸಕ್ತಿ ಇದೆ. ರಾಜಕೀಯದಲ್ಲಿರಲು ತನ್ನ ತಂದೆ ರಾಕೇಶ್ ಸಿದ್ದರಾಮಯ್ಯರಿಗೆ ಬಹಳ ಆಸೆ ಇತ್ತು. ಆದರೆ ಅವರು ತೀರಿಕೊಂಡ್ರು, ನಾನು ಅವರ ಕನಸನ್ನು ನನಸು ಮಾಡುತ್ತೇನೆ ಎಂದು ಧವನ್‌ ತಿಳಿಸಿದ್ದಾರೆ.

ರಾಜಕೀಯದ ಬಗ್ಗೆ ನಾನು ತಾತನ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದೇನೆ. ನಮ್ಮ ತಾತ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು, ತಾತನ ಗೆಲುವಿಗಾಗಿ ನಾನೂ ಕೆಲಸ ಮಾಡುತ್ತೇನೆ ಎಂದು ಧವನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

ಹೆಚ್ಚಿನ ಸುದ್ದಿ