Monday, July 7, 2025
Homeದೇಶಚೀನಾ ಹಿಂದಿಕ್ಕಿ ಅತಿ ಹೆಚ್ಚು ಜನಸಂಖ್ಯೆಯ ದೇಶವಾದ ಭಾರತ

ಚೀನಾ ಹಿಂದಿಕ್ಕಿ ಅತಿ ಹೆಚ್ಚು ಜನಸಂಖ್ಯೆಯ ದೇಶವಾದ ಭಾರತ

 

ನವದೆಹಲಿ: ಜನಸಂಖ್ಯೆಯಲ್ಲಿ 140.76 ಕೋಟಿ ತಲುಪುವದರೊಂದಿಗೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನಕ್ಕೇರಿದೆ. ಈ ಮೂಲಕ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದೆ.

6 ದಶಕಗಳ ಇತಿಹಾಸವನ್ನು ಗಮನಿಸುವುದಾದರೆ ಚೀನಾ ಜನಸಂಖ್ಯೆಯ ವಿಚಾರದಲ್ಲಿ ಮೊದಲ ಬಾರಿಗೆ ಕುಸಿತ ದಾಖಲಿಸಿದೆ. ಸದ್ಯ ಭಾರತದಲ್ಲಿ 142.86 ಕೋಟಿ ಜನರಿದ್ದರೆ ಚೀನಾದಲ್ಲಿ 142.57 ಕೋಟಿ ಜನರಿದ್ದಾರೆ.

ಒಂದು ಅಧ್ಯಯನದ ಪ್ರಕಾರ 1950ರಿಂದ ಭಾರತದ ಜನಸಂಖ್ಯೆ ಒಂದು ಶತಕೋಟಿ ಮೀರಿ ಬೆಳೆದಿದೆ.

ಆಫ್ರಿಕಾದಲ್ಲಿಯೂ ಜನಸಂಖ್ಯೆ ಹೆಚ್ಚುತ್ತಿದ್ದು, 2100 ರ ವೇಳೆಗೆ ಆಫ್ರಿಕಾ ಖಂಡದ ಜನಸಂಖ್ಯೆ 1.4 ರಿಂದ 3.9 ಶತಕೋಟಿಗಳಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಹೆಚ್ಚಿನ ಸುದ್ದಿ