Tuesday, October 7, 2025
Homeಚುನಾವಣೆ 2023ಅಶೋಕ್‌, ಸೋಮಣ್ಣ ಬದಲು ಜೋಷಿ, ಸಂತೋಷ್‌ ಕಣಕ್ಕಿಳಿಯಲಿ: ಕಾಂಗ್ರೆಸ್‌ ಸವಾಲು

ಅಶೋಕ್‌, ಸೋಮಣ್ಣ ಬದಲು ಜೋಷಿ, ಸಂತೋಷ್‌ ಕಣಕ್ಕಿಳಿಯಲಿ: ಕಾಂಗ್ರೆಸ್‌ ಸವಾಲು

ಕನಕಪುರ ಹಾಗೂ ವರುಣಾದಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಹಾಕುವುದಾಗಿ ಹೇಳಿ ಅಶೋಕ್‌ ಹಾಗೂ ಸೋಮಣ್ಣರನ್ನು ಕಣಕ್ಕಿಳಿಸಿರುವುದಕ್ಕೆ ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ನಾಗಪುರದ ವಂಶದವರು ಇತರರನ್ನ ಹೊಂಡಕ್ಕೆ ತಳ್ಳಿ ಆಳ ನೋಡುವ ಬದಲು ತಾವೇ ಮುಂದೆ ನಿಂತು ಸಾಮರ್ಥ್ಯ ತೋರಲಿ ಎಂದು ಕಾಂಗ್ರೆಸ್‌ ಆರ್‌ಎಸ್‌ಎಸ್‌ ನಾಯಕರಿಗೆ ಟಾಂಗ್‌ ನೀಡಿದೆ.

ಕನಕಪುರ & ವರುಣ ಕ್ಷೇತ್ರದಲ್ಲಿ ಬಿ. ಎಲ್ ಸಂತೋಷ್ & ಪ್ರಹ್ಲಾದ್ ಜೋಷಿ ಅವರನ್ನು ಸ್ಪರ್ಧೆಗೆ ಆಹ್ವಾನಿಸುತ್ತೇವೆ. ಪಂಥಾಹ್ವಾನ ಸ್ವೀಕರಿಸುವರೇ? ಬಿ.ಎಲ್ ಸಂತೋಷ್ ತೆರೆಮರೆಯಿಂದ ಹೊರಬಂದು ಚುನಾವಣೆಗೆ ಸ್ಪರ್ಧಿಸಿ ಸಾಮರ್ಥ್ಯ ನಿರೂಪಿಸಲಿ ಎಂದು ಕಾಂಗ್ರೆಸ್‌ ಸವಾಲು ಹಾಕಿದೆ.

ಕನಕಪುರದಲ್ಲಿ ಡಿಕೆ ಶಿವಕುಮಾರ್‌ ವಿರುದ್ಧ ಬಿಜೆಪಿ ಆರ್‌ ಅಶೋಕ್‌ರನ್ನು ಕಣಕ್ಕಿಳಿಸಿದೆ. ವರುಣಾದಲ್ಲಿ ಕೂಡಾ ಸಿದ್ದರಾಮಯ್ಯರನ್ನು ಕಟ್ಟಿ ಹಾಕಲು ಸಚಿವ ಸೋಮಣ್ಣರನ್ನು ಕಣಕ್ಕಿಳಿಸಿದೆ.

ಹೆಚ್ಚಿನ ಸುದ್ದಿ