Monday, October 13, 2025
Homeದೇಶ30 ಶಾಸಕರೊಂದಿಗೆ ಎನ್ ಸಿಪಿಯ ಅಜಿತ್ ಪವಾರ್ ಬಿಜೆಪಿಗೆ?

30 ಶಾಸಕರೊಂದಿಗೆ ಎನ್ ಸಿಪಿಯ ಅಜಿತ್ ಪವಾರ್ ಬಿಜೆಪಿಗೆ?

ಮುಂಬೈ: ಬಿಜೆಪಿ ಜೊತೆ ಸೇರಿ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಮಹಾರಾಷ್ಟ್ರ ಸರ್ಕಾರ ಉರುಳಿಸಿ ವರ್ಷವಾದ ಮೇಲೆ ಇದೀಗ ಎನ್ ಸಿಪಿ ನಾಯಕ ಅಜಿತ್ ಪವಾರ್ 30 ಶಾಸಕರೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂದು ವರದಿಯಾಗಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ಇತ್ತೀಚೆಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಉದ್ಧವ್ ಠಾಕ್ರೆ ಅವರಿಗೆ ತಮ್ಮ ಪಕ್ಷ ಎಂದಿಗೂ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಹೇಳಿದ್ದರು ಎಂದಿದ್ದಾರೆ.

ಮಹಾರಾಷ್ಟ್ರದಲ್ಲೂ ಆಪರೇಷನ್ ಕಮಲಕ್ಕೆ ತಯಾರಿಗಳು ಶುರುವಾಗಿದೆಯೇ, ಶಿವಸೇನೆಗೆ ತಿರುಗೇಟು ನೀಡಲು ಬಿಜೆಪಿ ಎನ್ ಸಿಪಿ ನಾಯಕರನ್ನು ಗುರಿಯಾಗಿಸಿದೆಯೇ ಎನ್ನುವ ಪ್ರಶ್ನೆಗಳು ಮೂಡಿವೆ.

ಆದರೆ ಅಜಿತ್ ಪವಾರ್ ಬಿಜೆಪಿ ಸೇರ್ಪಡೆಯ ಸುದ್ದಿ ಸುಳ್ಳು ಎಂದಿದ್ದಾರೆ‌.

ಹೆಚ್ಚಿನ ಸುದ್ದಿ