ಬೆಂಗಳೂರು: ಉದ್ಯಮಿ, ಕಾಂಗ್ರೆಸ್ ಮುಖಂಡ ಯೂಸುಫ್ ಶರೀಪ್ ಅಲಿಯಾಸ್ ಕೆಜಿಎಫ್ ಬಾಬು ಮನೆ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ಮಾಡಿದ್ದು, ದಾಳಿ ವೇಳೆಯಲ್ಲಿ 1,925 ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿವೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ 1,925 ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದು, 1,925 ಚೆಕ್ ಗಳ ಜತೆಯಲ್ಲಿ ವೋಟರ್ ಐಡಿಗಳನ್ನ ಶೇಖರಿಸಿಟ್ಟಿದ್ದ ಎನ್ನಲಾಗಿದೆ. HDFC ಬ್ಯಾಂಕ್ ಅಕೌಂಟ್ ನ ಚೆಕ್ ಗಳು ಇವಾಗಿವೆ. ಪ್ರತೀ ಚೆಕ್ ನಲ್ಲಿ 5000 ರೂ. ಅಂತ ಬರೆದಿದಲಾಗಿದೆ.
ಇನ್ನು ಮನೆಯ ನೆಲಮಹಡಿಯಲ್ಲಿ 26 ಬ್ಯಾಗ್ ಗಳಲ್ಲಿದ್ದ ಸೀರೆ, ಚಿಕ್ಕಪೇಟೆಗೆ ಸಂಬಂಧಿಸಿದ ಮುದ್ರಣ ಪ್ರತಿಗಳು, ವ್ಯಾನ್ ಹುಸೇನ್ ಕಂಪನಿಯ 481 ಸೂಟ್ ಗಳು ಪತ್ತೆಯಾಗಿವೆ.
ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಮಾಡಿದ ಹಿನ್ನೆಲೆ, ಶಿವಾಜಿನಗರ ವಲಯದ ಚುನಾವಣಾ ಉಸ್ತುವಾರಿಯಿಂದ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ಬಂದಿತ್ತು. ಕೆಜಿಎಫ್ ಬಾಬು ವಿರುದ್ಧ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲು ಮಾಡಿದ್ದು, ಇಂದು ಕೋರ್ಟ್ ಅನುಮತಿ ಪಡೆದು ಎಫ್ ಐಆರ್ ದಾಖಲು ಮಾಡಲಿದ್ದಾರೆ.