Monday, July 7, 2025
Homeಚುನಾವಣೆ 2023ಜೈ ಭಾರತ್ ಸಮಾವೇಶಕ್ಕೆ ಸಜ್ಜಾದ ಕೋಲಾರ

ಜೈ ಭಾರತ್ ಸಮಾವೇಶಕ್ಕೆ ಸಜ್ಜಾದ ಕೋಲಾರ

ಕೋಲಾರ: ಕರ್ನಾಟಕ ಕಾಂಗ್ರೆಸ್‌ ಪಕ್ಷ ಇಂದು ಕೋಲಾರದಲ್ಲಿ ಜೈ ಭಾರತ ಸತ್ಯಾಗ್ರಹ ಸಮಾವೇಶ ಹಮ್ಮಿಕೊಂಡಿದೆ. ರಾಹುಲ್ ಗಾಂಧಿ 2019ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕೋಲಾರದಲ್ಲಿ ಮಾಡಿದ ಭಾಷಣದ ಕಾರಣ ನೀಡಿ ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ಕ್ರಮ ಖಂಡಿಸುವುದು ಮತ್ತು ದೇಶದ ಪ್ರಜಾಪ್ರಭುತ್ವ ಉಳಿವಿಗಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಕನಿಷ್ಠ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಮೂರು ಬೃಹತ್‌ ಜರ್ಮನ್‌ ಶೆಡ್‌, 60 ಸಾವಿರಕ್ಕೂ ಅಧಿಕ ಆಸನಗಳು, ಎಲ್‌ಇಡಿ ಪರದೆಗಳು ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ.

ನಾಲ್ಕು ಬಾರಿ ಮುಂದೂಡಿಕೆಯಾಗಿದ್ದ ಕಾಂಗ್ರೆಸ್‌ನ ಜೈ ಭಾರತ್‌ ಸಮಾವೇಶ ಇಂದುನಾಲ್ಕು ಬಾರಿ ಮುಂದೂಡಿಕೆಯಾಗಿದ್ದ ಕಾಂಗ್ರೆಸ್‌ನ ಜೈ ಭಾರತ್‌ ಸಮಾವೇಶ ಕೋಲಾರ ಹೊರವಲಯದ ಟಮಕದಲ್ಲಿ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.

ಇಂದು ಬೆಳಗ್ಗೆ 11.00ಕ್ಕೆ ಜೈ ಭಾರತ ಸತ್ಯಾಗ್ರಹ ಸಮಾವೇಶ ಚಾಲನೆ ದೊರಕಲಿದೆ. ಕೋಲಾರದ ದೇವರಾಜ ಅರಸು ಕಾಲೇಜು ಎದುರು ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಕಾರ್ಯದರ್ಶಿಗಳು ಹಾಗೂ ರಾಜ್ಯದ ಇತರ ನಾಯಕರು, ಶಾಸಕರು ಮತ್ತಿತರರು ಭಾಗವಹಿಸಲಿದ್ದಾರೆ.

ಕೋಲಾರದ ಭಾಷಣದಲ್ಲಿ ಮೋದಿ ಉಪನಾಮ ಟೀಕೆಗೆ ಸಂಬಂಧಿಸಿ ಕೇಸ್‌ ದಾಖಲಗಿದ್ದಕ್ಕಾಗಿ, 7 ಲಕ್ಷ ಮತಗಳ ಅಂತರದಲ್ಲಿ ಗೆದ್ದು, ಸಂಸತ್ ಸದಸ್ಯರಾದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಮಾನ. ರಾಹುಲ್ ಗಾಂಧಿ ಎಲ್ಲಿ ಭಾಷಣ ಮಾಡಿದ್ದರೋ ಅಲ್ಲಿಯೇ ಮತ್ತೆ ಭಾಷಣ ಮಾಡಬೇಕು. ಹಾಗಾಗಿಯೇ ಕೋಲಾರದಲ್ಲಿ ಜೈ ಭಾರತ್ ಸತ್ಯಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಲೋಕಸಭೆಯಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ ವಿರುದ್ಧ ಕಾಂಗ್ರೆಸ್‌ ಈಗಾಗಲೇ ಹಲವು ಪ್ರತಿಭಟನೆಗಳನ್ನು ನಡೆಸಿದೆ. ಕೇರಳದ ವಯನಾಡಿನಲ್ಲಿ ಕರಾಳ ದಿನವನ್ನೂ ಆಚರಿಸಿತ್ತು. ರಾಹುಲ್ ಗಾಂಧಿ ವಿರುದ್ಧದ ಕ್ರಮ ತರಾತುರಿ ಮತ್ತು ರಾಜಕೀಯ ಪ್ರೇರಿತ ಎಂದು ಇದಕ್ಕೂ ಮುನ್ನ ಕೇರಳದ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಹೇಳಿದ್ದರು.

ಹೆಚ್ಚಿನ ಸುದ್ದಿ