ಪ್ರಚಾರದ ನೆಪದಲ್ಲಿ ಮಹಿಳೆಯರನ್ನು ಮಂಚಕ್ಕೆ ಕರೆದ ಆರೋಪ ಕೇಳಿಬಂದಿದೆ. ಗೋವಿಂದರಾಜು ಚುನಾವಣಾ ಪ್ರಚಾರಕ್ಕೆ ಮಹಿಳೆಯರನ್ನು ಕರೆಸುವ ನೆಪದಲ್ಲಿ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ವಿರುದ್ಧ ಮಹಿಳೆಯರು ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ಮಾತನಾಡಿರುವ ಆಡಿಯೋ ಹರಿದಾಡುತ್ತಿದ್ದು, ಭಾರೀ ಆಕ್ರೋಶ ಕೇಳಿ ಬಂದಿರುವುದಲ್ಲದೆ, ಗೋ ಬ್ಯಾಕ್ ಗೋವಿಂದ ರಾಜು ಎಂದು ಆಕ್ರೀಷ ವ್ಯಕ್ತಪಡಿಸಿ ಅವರಿಗೆ ಬಿ ಫಾರಂ ನೀಡದೆ ಅಭ್ಯರ್ಥಿ ಬದಲಿಸುವಂತೆ ಮಹಿಳೆಯರು ಪಟ್ಟು ಹಿಡಿದಿದ್ದಾರೆ.
ಇತ್ತೀಚೆಗೆ ಎನ್. ಗೋವಿಂದರಾಜು ವಿರುದ್ಧ ಹಣ ಹಂಚಿಕೆ ಆರೋಪ ಸಹ ಕೇಳಿಬಂದಿತ್ತು. ತುಮಕೂರು ನಗರ ಹೆತ್ತೆನಹಳ್ಳಿ ಮಾರಮ್ಮ ದೇವಸ್ಥಾನದಲ್ಲಿ ಜನರಿಗೆ ಹಣ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ತುಮಕೂರಿನ ಜಯಪುರದ ಮತದಾರರನ್ನು ಬಸ್ನಲ್ಲಿ ಕರೆದೊಯ್ದು ತಲಾ 500, 1,000 ರೂ ಹಂಚಿಕೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು.
