ಬೆಂಗಳೂರು: ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿ ಜಾತ್ಯಾತೀತ ಜನತಾದಳ ಪಕ್ಷ ಬುಧವಾರ ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೂರನೇ ಪಟ್ಟಿಯಲ್ಲಿ 59 ಮಂದಿಗೆ ಸ್ಥಾನ ನೀಡಲಾಗಿದೆ.
ಗಮನಾರ್ಹ ಬೆಳವಣಿಗೆಯೆಂದರೆ ಮೂರನೇ ಪಟ್ಟಿಯಲ್ಲಿ ವರುಣಾ ಕ್ಷೇತ್ರಕ್ಕೆ ಸಿದ್ಧರಾಮಯ್ಯ ಮತ್ತು ಸೋಮಣ್ಣ ಎದುರಾಳಿಯಾಗಿ, ಭಾರತೀ ಶಂಕರ್ ಅವರನ್ನು ಕಣಕ್ಕಿಳಿಸಲಾಗಿದೆ. ಉಳಿದಂತೆ ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಹುಕ್ಕೇರಿ ಸೇರಿದಂತೆ 59 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನಾಂಕವಾಗಿದ್ದು ಅಭ್ಯರ್ಥಿಗಳಿಗೆ ಕ್ಲುಪ್ತ ಕಾಲದಲ್ಲಿ ನಾಮಪತ್ರ ಸಲ್ಲಿಸಲು ಸೂಚಿಸಲಾಗಿದೆ.