ಬೆಂಗಳೂರು : ಕರುನಾಡ ಜನರಿಗೆ ಜೆಡಿಎಸ್ ಪರಿಹಾರ ಎಂಬ ಶೀರ್ಷಿಕೆಯಡಿ ಜೆಡಿಎಸ್ ಪಕ್ಷ ಶನಿವಾರ ತನ್ನ ಚುನಾವಣಾ ಭರವಸೆ ಪಾತ್ರವನ್ನು ಬಿಡುಗಡೆ ಮಾಡಿದೆ. ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಇಂದು ಮುಂಜಾನೆ ದೇವೇಗೌಡರ ನಿವಾಸದಲ್ಲಿ ಭರವಸೆ ಪತ್ರವನ್ನು ಬಿಡುಗಡೆ ಮಾಡಿದರು.
ರೈತ ಚೈತನ್ಯ ಹೆಸರಿನಲ್ಲಿ ಪ್ರತೀ ಎಕೆರೆಗೆ ಹತ್ತು ಸಾವಿರ ಧನಸಹಾಯ ಘೋಷಿಸಲಾಗಿದ್ದು, ಪ್ರತಿ ಕೃಷಿ ಕಾರ್ಮಿಕ ಕುಟುಂಬಕ್ಕೆ ಎರಡು ಸಾವಿರ ಸಹಾಯ ಧನ ಹಾಗೂ
ರೈತ ಯುವಕರನ್ನು ಮದುವೆಯಾಗುವ ಯುವತಿಯರಿಗೆ ಎರಡು ಲಕ್ಷ ಪ್ರೋತ್ಸಾಹ ಧನ ನೀಡುವುದಾಗಿ ಜೆಡಿಎಸ್ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಜೊತೆಗೆ ಹಿರಿಯ ನಾಗರಿಕರ ಮಾಸಾಶನವನ್ನು 1200 ರಿಂದ 5000 ಕ್ಕೆ ಏರಿಕೆ ಮಾಡುವುದಾಗಿ ಭರವಸೆ ನೀಡಲಾಗಿದೆ.
ಮಾತೃಶ್ರೀ ಮಹಿಳಾ ಸಬಲೀಕರಣ ಘೋಷಣೆಯಡಿ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ ಸೇರಿದಂತೆ ಮಹಿಳೆಯರಿಗೆ ಭರಪೂರ ಯೋಜನೆಗಳನ್ನು ಘೋಷಿಸಲ್ಗಿದೆ.
ವರ್ಷಕ್ಕೆ 5 ಗ್ಯಾಸ್ ಸಿಲಿಂಡರ್ ಉಚಿತ, ಗರ್ಭಿಣಿಯರಿಗೆ 6 ತಿಂಗಳ ಕಾಳ 6 ಸಾವಿರ ಭತ್ಯೆ , ಅಂಗನವಾಡಿ ಕಾರ್ಯಕರ್ತರಿಗೆ ಪಿಂಚಣಿ ಹಾಗೂ ವಿಧವಾ ವೇತನ 2500 ರೂಪಾಯಿಗೆ ಹೆಚ್ಚಳ ಮಾಡುವುದಾಗಿ ಜೆಡಿಎಸ್ ಪ್ರಣಾಳಿಕೆ ಹೇಳಿದೆ

