ಮೈಸೂರು: ಜೆಡಿಎಸ್ ಮೂರನೇ ಪಟ್ಟಿ ಬುಧವಾರ ಸಂಜೆ ಬಿಡುಗಡೆಯಾಗಿದೆ. ಆದರೆ ನಂಜನಗೂಡು ಕ್ಷೇತ್ರಕ್ಕೆ ಜೆಡಿಎಸ್ ಯಾವುದೇ ಅಭ್ಯರ್ಥಿಯನ್ನು ಘೋಷಿಸಿಲ್ಲ. ಈ ಮೂಲಕ ಇತ್ತೀಚಿಗಷ್ಟೇ ನಿಧನರಾದ ಮಾಜಿ ಸಂಸದ ಧ್ರುವನಾರಾಯಣ್ ಅವರ ಪುತ್ರ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವ ನಾರಾಯಣ್ ಅವರಿಗೆ ಜೆಡಿಎಸ್ ಪರೋಕ್ಷವಾಗಿ ಬೆಂಬಲ ಸೂಚಿಸಿದೆ.
ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಅತಿದೊಡ್ಡ ಶಕ್ತಿಯಾಗಿದ್ದ ಧ್ರುವ ನಾರಾಯಣ್ ಅವರ ನಿಧಾನನಂತರ ಕಾಂಗ್ರೆಸ್ ಅವರ ಪುತ್ರನಿಗೆ ಟಿಕೆಟ್ ಘೋಷಿಸಿತ್ತು. ಅಜಾತಶತ್ರು ಎಂದೇ ಹೆಸರಾಗಿದ್ದ ಧ್ರುವನಾರಾಯಣ್ ಎಲ್ಲಾ ಪಕ್ಷಗಳಲ್ಲೂ ವಿಶ್ವಾಸಿಗಳನ್ನು ಹೊಂದಿದ್ದರು.