ಹುಬ್ಬಳ್ಳಿ: ಟಿಕೆಟ್ ಹಂಚಿಕೆ ವಿವಾದದಿಂದಾಗಿ ಬಿಜೆಪಿಗೆ ಆಗುತ್ತಿರುವ ಹಾನಿಯನ್ನು ತಡೆಯಲು ಹೈಕಮ್ಯಾಂಡ್ ಗಮನ ಹರಿಸಿದೆ. ಇದರ ಅಂಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮಂಗಳವಾರ ಸಂಜೆ ರಾಜ್ಯಕ್ಕೆ ಆಗಮಿಸಿದ್ದು, ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಇಂದಿನಿಂದ ಎರಡು ದಿನಗಳ ಕಾಲ ಧಾರವಾಡ, ಹಾವೇರಿ ಪ್ರವಾಸ ನಡೆಲಿರುವ ಜೆ.ಪಿ.ನಡ್ಡಾ, ಎರಡೂ ದಿನಗಳ ಕಾಲ ಸರಣಿ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಪಕ್ಷ ತೊರೆದ ಕಾರಣ ಸಾಕಷ್ಟು ಸ್ಥಳೀಯ ಮುಖಂಡರು ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗುವ ಆತಂಕ ಎದುರಾಗಿದ್ದು, ಇದನ್ನು ತಡೆಯುವ ಸಲುವಾಗಿ ಪ್ರಮುಖ ಮುಖಂಡರೊಡನೆ ಸಂವಾದವನ್ನೂ ಸಹ ನಡೆಸಲಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ನಳೀನ್ ಕುಮಾರ್ ಕಟೀಲ್, ಮಹೇಶ್ ಟೆಂಗಿನಕಾಯಿ, ಎಮ್‌ಆರ್ ಪಾಟೀಲ್, ಅರವಿಂದ ಬೆಲ್ಲದ, ಪ್ರದೀಪ್ ಶೆಟ್ಟರ್ ನಡ್ಡಾ ಅವರಿಗೆ ಜೊತೆಗೂಡಲಿದ್ದಾರೆ.
