Monday, March 2, 2026
Homeಚುನಾವಣೆ 2023ಶೆಟ್ಟರ್ ಗೆ ಟಿಕೆಟ್ ನಿರಾಕರಣೆ - ಜೆ.ಪಿ.ನಡ್ಡಾ ಸಮರ್ಥನೆ

ಶೆಟ್ಟರ್ ಗೆ ಟಿಕೆಟ್ ನಿರಾಕರಣೆ – ಜೆ.ಪಿ.ನಡ್ಡಾ ಸಮರ್ಥನೆ

ಹುಬ್ಬಳ್ಳಿ : ಜಗದೀಶ್ ಶೆಟ್ಟರ್ ಕಾಂಗ್ರೆಸ್ ಹೋಗಿದ್ದಾರೆ ಎಂದರೆ ನಮ್ಮ ನಿರ್ಧಾರ ಸರಿಯಾಗಿಯೇ ಇದೆ ಎಂದು ಬಿಎಜಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಹೇಳಿದ್ದಾರೆ. ಮಂಗಳವಾರ ಸಂಜೆ ಅವರು ಬಿಜೆಪಿ ಸಂವಾದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್ ಎಪ್ಪತ್ತು ವರ್ಷದಿಂದ ಸಮಾಜವನ್ನು ಒಡೆಯುತ್ತಾ ಬಂದಿದೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿಯವರ ನಡೆಯನ್ನು ಶ್ಲಾಘಿಸಿದ ನಡ್ಡಾ, ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಭಾರತದ ರಾಜಕೀಯ ಸ್ವರೂಪವನ್ನೂ ಪ್ರಧಾನಿ ಮೋದಿ ಬದಲಿಸುತ್ತಿದ್ದು, ಅವರ ನೇತೃತ್ವದ ಆಡಳಿತದಲ್ಲಿ ದೇಶ ಬಹುದೊಡ್ಡ ಪ್ರಗತಿ ಕಂಡಿದೆ ಎಂದರು.

ಹೆಚ್ಚಿನ ಸುದ್ದಿ