ಶಿವಮೊಗ್ಗ: ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಬಿಜೆಪಿ ಸೇರ್ಪಡೆ ವಿಚಾರಕ್ಕೆ ತಿಮ್ಮಪ್ಪ ತೀವ್ರವಾಗಿ ಬೇಸರಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮಗಳು ರಾಜನಂದಿನಿ ಈ ರೀತಿ ಮಾಡ್ತಾಳೆ ಎಂದುಕೊಂಡಿರಲಿಲ್ಲ. ಈ ಅಲೋಚನೆಯನ್ನೂ ಮಾಡಿರಲಿಲ್ಲ.ನಾನು ರಾಜಕಾರಣದಲ್ಲಿ ಒಂದು ಭದ್ದತೆ ಇಟ್ಟುಕೊಂಡು ಬಂದವನು. ಬದ್ದತೆಗೆ ತಕ್ಕಂತೆ ನಡೆದುಕೊಂಡಿದ್ದೇನೆ. ಪಕ್ಷವೂ ನನ್ನನ್ನು ಹಾಗೆಯೇ ನಡೆಸಿಕೊಂಡಿದ್ದು, ಆ ಬಗ್ಗೆ ನನಗೆ ಸಂತೋಷವೂ ಇದೆ.
ಇಂತಹ ಸನ್ನಿವೇಶದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾಳೆ ಅಂದ್ರೆ ಇವತ್ತು ನನಗೆ ಎದೆಗೆ ಚೂರಿ ಹಾಕಿದ ಹಾಗೆ ಅಗಿದೆ.ನನ್ನ ಪುತ್ರಿ ಈ ಕೆಲಸ ಮಾಡಬಾರದಿತ್ತು.ಮಗಳಾಗಿ ಇವಳು ಈ ರೀತಿ ನಡೆದುಕೊಂಡಿದ್ದ ಸರಿಯಲ್ಲ ಎಂದಿದ್ದಾರೆ
ಇನ್ನು ಮಗಳ ಈ ನಡೆಯ ಹಿಂದೆ ಯಾದ್ದೋ ಕುತಂತ್ರವಿರಬೇಕು ಎಂದು ಶಂಕಿಸಿದ ಕಾಗೋಡು ತಮ್ಮಪ್ಪ, ಹರತಾಳು ಹಾಲಪ್ಪನ ಕೃತ್ಯ ಇದ್ದರೂ ಇರಬಹುದು ಎಂದ್ರು. ಅದೇನೇ ಇದ್ರೂ ನಾನು ಕೂಡ ಮನ ಒಲಿಸುವ ಪ್ರಯತ್ನ ಮಾಡುತ್ತೇನೆ. ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ. ಕಾಂಗ್ರೆಸ್ ಪರ ನಿಲ್ಲುವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತೇನೆ ಎಂದರು
