Monday, July 7, 2025
Homeಚುನಾವಣೆ 2023ಸುದೀಪ್‌ ಆಯ್ತು ಈಗ ರಿಷಬ್‌ ಸರದಿ: ಕುತೂಹಲ ಹುಟ್ಟಿಸಿದ ಸಿಎಂ ಭೇಟಿ

ಸುದೀಪ್‌ ಆಯ್ತು ಈಗ ರಿಷಬ್‌ ಸರದಿ: ಕುತೂಹಲ ಹುಟ್ಟಿಸಿದ ಸಿಎಂ ಭೇಟಿ

ಇತ್ತೀಚೆಗಷ್ಟೇ ನಟ ಸುದೀಪ್‌ ಬಿಜೆಪಿ ಪರವಾಗಿ ಅದರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಪರವಾಗಿ ಪ್ರಚಾರ ಮಾಡುವುದಾಗಿ ಘೋಸಿಸಿದ್ರು. ಈ ನಡುವೆ, ಕಾಂತಾರ ಖ್ಯಾತಿಯ ನಟ ರಿಷಬ್‌ ಶೆಟ್ಟಿಯನ್ನು ಸಿಎಂ ಬೊಮ್ಮಾಯಿ ಭೇಟಿಯಾಗಿದ್ದು ಕುತೂಹಲ ಹುಟ್ಟಿಸಿದೆ.

ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದ ವೇಳೆಯೇ ನಟ ರಿಷಬ್ ಶೆಟ್ಟಿ ಕೂಡ ಕುಟುಂಬ ಸಮೇತ ದೇವಿಯ ದರ್ಶನ ಮಾಡಿದ್ದಾರೆ. ಬಿಜೆಪಿ ಪರ ನಟ ರಿಷಬ್ ಶೆಟ್ಟಿ ಪ್ರಚಾರ ಮಾಡ್ತಾರೆಂದು ಈಗಾಗಲೇ ಊಹಾಪೋಹಗಳು ಇದ್ದು, ಈ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ.

ʼಈವರೆಗೆ ನಟ ರಿಷಬ್ ಶೆಟ್ಟಿ ಜತೆ ಯಾವುದೇ ಮಾತುಕತೆ ನಡೆದಿಲ್ಲ. ಮೂಕಾಂಬಿಕೆ ಏನು ಎಂಬ ಆಶೀರ್ವಾದ ಕೊಡುತ್ತಾಳೆ ನೋಡೋಣ. ನಮ್ಮ ಸಿದ್ಧಾಂತಕ್ಕೂ ಅವರ ಸಿದ್ಧಾಂತಕ್ಕೂ ಬಹಳ ಸಾಮ್ಯತೆ ಇದೆ. ಆಕಸ್ಮಿಕವಾಗಿ ದೇವಸ್ಥಾನದಲ್ಲಿ ನನಗೆ ನಟ ರಿಷಬ್ ಶೆಟ್ಟಿ ಸಿಕ್ಕಿದ್ದಾರೆ. ನಾನು ಬರುವ ಮೊದಲೇ ರಿಷಬ್ ಶೆಟ್ಟಿ ದೇವಸ್ಥಾನದಲ್ಲಿ ಇದ್ದರು. ಈ ಹಿಂದೆ ಕೂಡ ನಮ್ಮ ಸಿದ್ಧಾಂತವನ್ನು ಪ್ರತಿಪಾದನೆ ಮಾಡಿದ್ದಾರೆ. ಬಿಜೆಪಿ, ನಾಯಕತ್ವ ಬಗ್ಗೆ ರಿಷಬ್ ಒಲವಿರುವ ಮಾತಾಡಿದ್ದಾರೆʼ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಖಾಸಗಿ ಮಾಧ್ಯಮವೊಂದರ ಸಂದರ್ಶನದ ವೇಳೆ ನರೇಂದ್ರ ಮೋದಿಯನ್ನು ʼಅದ್ಭುತ ನಾಯಕʼ ಎಂದು ಬಣ್ಣಿಸಿದ್ದ ರಿಷಬ್‌ ಶೆಟ್ಟಿ ಬಿಜೆಪಿ ಪರವಾಗಿ ಫೀಲ್ಡಿಗಿಳಿಯಲಿದ್ದಾರೆ ಎಂಬ ವದಂತಿ ಈ ಹಿಂದೆಯೇ ಇತ್ತು. ಸಿಎಂ ಜೊತೆ ಭೇಟಿ ಬಳಿಕ ಅದಕ್ಕೆ ಇನ್ನಷ್ಟು ಪುಷ್ಠಿ ಲಭಿಸಿದೆ.

ಹೆಚ್ಚಿನ ಸುದ್ದಿ