Sunday, October 12, 2025
Homeಚುನಾವಣೆ 2023ಸಿಎಂ ಕ್ಷೇತ್ರದಲ್ಲಿ ಕಿಚ್ಚ ಸುದೀಪ್‌ ಹವಾ.!

ಸಿಎಂ ಕ್ಷೇತ್ರದಲ್ಲಿ ಕಿಚ್ಚ ಸುದೀಪ್‌ ಹವಾ.!

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಾಮಪತ್ರ ಸಲ್ಲಿಕೆ ವೇಳೆ ಕಿಚ್ಚ ಸುದೀಪ್‌, ಜೆಪಿ ನಡ್ಡಾ ಮೊಲಾದ ಘಟಾನುಘಟಿಗಳು ಸಾಥ್‌ ನೀಡಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಶಿಗ್ಗಾಂವಿಯಲ್ಲಿ ಬಿಜೆಪಿಯ ಬೃತ್​ ಸಮಾವೇಶ ನಡೆದಿದೆ.

ಶಿಗ್ಗಾಂವಿ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶ ನಡೆದಿದ್ದು, ಸಮಾವೇಶದಲ್ಲಿ ಬಸವರಾಜ್​ ಬೊಮ್ಮಾಯಿ ಅವರ ಶಕ್ತಿ ಪ್ರದರ್ಶನ ನಡೆದಿದೆ.

ಚೆನ್ನಮ್ಮ ಸರ್ಕಲ್​ನಿಂದ ಸಮಾವೇಶದ ಸ್ಥಳದವರೆಗೂ ರೋಡ್​ ಶೋ ನಡೆದಿದ್ದು, ಈ ವೇಳೆ ಸುದೀಪ್‌ ಅವರ ಭಾವಚಿತ್ರ ಇರುವ ಬಾವುಟಗಳು ರಾರಾಜಿಸಿವೆ. ಸುದೀಪ್‌ ಅಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ನೆಚ್ಚಿನ ತಾರೆಯನ್ನು ಕಂಡು ಶಿಳ್ಳೆ, ಕೇಕೆ ಹಾಕಿದ್ದಾರೆ. ಯುವ ಜನತೆಯೇ ಹೆಚ್ಚಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

 

 

ಹೆಚ್ಚಿನ ಸುದ್ದಿ