Monday, October 13, 2025
Homeಟಾಪ್ ನ್ಯೂಸ್ಸಿಎಂ ಹೆಲಿಕಾಪ್ಟರ್‌ನಿಂದ ಹೊತ್ತಿತು ಬೆಂಕಿ !

ಸಿಎಂ ಹೆಲಿಕಾಪ್ಟರ್‌ನಿಂದ ಹೊತ್ತಿತು ಬೆಂಕಿ !

ಕೊಲ್ಲೂರು: ಟೆಂಪಲ್‌ ರನ್‌ ಮಾಡುತ್ತಿರುವ ಸಿಎಂ ಬಸವರಾಜ್‌ ಬೊಮ್ಮಾಯಿಗೆ ವಿಘ್ನವೊಂದು ಎದುರಾಗಿದೆ. ಕೊಲ್ಲೂರು ಮೂಕಾಂಬಿಕಾ ದರ್ಶನಕ್ಕೆ ತೆರಳಿದ್ದ ವೇಳೆ ಬೊಮ್ಮಾಯಿ ಅವರ ಹೆಲಿಕ್ಯಾಪ್ಟರ್‌ ಲ್ಯಾಂಡ್‌ ಆಗುತ್ತಿದ್ದ ಹೆಲಿಪ್ಯಾಡ್‌ ನಲ್ಲಿ ಬೆಂಕಿ ಹೊತ್ತಿಕೊಂಡಿದೆ.

ಸಿಎಂ ಬಸವರಾಜ ಬೊಮ್ಮಾಯಿ ಕೊಲ್ಲೂರಿಗೆ ತೆರಳಿ ದೇಗುಲದಿಂದ ವಾಪಸ್ ಹೊರಡುವ ವೇಳೆ ಹೆಲಿಪ್ಯಾಡ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬೈಂದೂರಿನ ಅರೇಶಿರೂರು ಹೆಲಿಪ್ಯಾಡ್‌ನಲ್ಲಿ ಗುರುವಾರ ನಡೆದಿದೆ.

  ಉಡುಪಿ ಜಿಲ್ಲೆ ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್​ ಬಳಿ ಮುಖ್ಯಮಂತ್ರಿಗಳ ಎಸ್ಕಾರ್ಟ್​​ ಹೋದ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು ಕೆಲ ಕ್ಷಣ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸಿಎಂ ಹೆಲಿಕ್ಯಾಪ್ಟರ್ ಹೊರಟ ಎರಡು ನಿಮಿಷದಲ್ಲೇ ಹೆಲಿಪ್ಯಾಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೈಂದೂರಿನ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ. ಸಿಎಂ ಆಗಮನದ ಹಿನ್ನೆಲೆಯಲ್ಲಿ ಕಸವನ್ನು ಸ್ವಚ್ಛಗೊಳಿಸಿ ಬೆಂಕಿಯನ್ನು ಒಟ್ಟಲಾಗಿತ್ತು. ಹೆಲಿಕ್ಯಾಪ್ಟರ್ ಫ್ಯಾನ್ ಗಾಳಿಗೆ ಆ ಕಿಡಿ ಮತ್ತೆ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಅಪಾಯ ವರದಿಯಾಗಿಲ್ಲ.  ಭದ್ರತೆಗಾಗಿ ಆಗಮಿಸಿದ್ದ ಎಸ್ಕಾರ್ಟ್ ವಾಹನ ಹೊರಟ ಕೂಡಲೇ ಈ ಘಟನೆ ನಡೆದಿದೆ.

ಹೆಚ್ಚಿನ ಸುದ್ದಿ