Monday, March 2, 2026
Homeಚುನಾವಣೆ 2023ಸಿದ್ದು ಕೈ ತಪ್ಪಿದ ಕೋಲಾರ -ಕೊತ್ತೂರು ಮಂಜು ಕಣಕ್ಕೆ

ಸಿದ್ದು ಕೈ ತಪ್ಪಿದ ಕೋಲಾರ -ಕೊತ್ತೂರು ಮಂಜು ಕಣಕ್ಕೆ

ಬೆಂಗಳೂರು: ಕಾಂಗ್ರೆಸ್ ಮೂರನೇ ಪಟ್ಟಿ ಶನಿವಾರ ಮಧ್ಯಾಹ್ನ ಬಿಡುಗಡೆಯಾಗಿದೆ. ಮೂರನೇ ಪಟ್ಟಿಯಲ್ಲಿ ಬಹುನಿರೀಕ್ಷಿತ ಕ್ಷೇತ್ರವಾಗಿದ್ದ ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಕೊತ್ತೂರು ಮಂಜುನಾಥ್ ಅವರಿಗೆ ಕೋಲಾರದಿಂದ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
ಎರಡು ತಿಂಗಳ ಮುಂಚೆಯೇ ಕೋಲಾರದಿಂದ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದರು. ಬಳಿಕ ಕೋಲಾರಕ್ಕೆ ಭೇಟಿ ನೀಡಿ ಕಾರ್ಯಕರ್ತರೊಡನೆ ಸಮಾಲೋಚನೆಯನ್ನೂ ಸಹ ನಡೆಸಲಾಗಿತ್ತು. ಬಳಿಕ ಕೋಲಾರದಲ್ಲಿ ಹೈವೋಲ್ಟೇಜ್ ಕದನವನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ಮಧ್ಯ ವರುಣಾದಿಂದ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ ಸಿದ್ದರಾಮಯ್ಯ, ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದರು.
ಈ ಮಧ್ಯ ಕೋಲಾರ ಸಿದ್ದು ಕೈತಪ್ಪುವುದು ಖಚಿತವಾಗುತ್ತಿದ್ದಂತೆಯೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನಗೊಂಡಿದ್ದು, ಅವರ ಮನವೊಲಿಕೆಗೆ ರಣ್‌ದೀಪ್ ಸಿಂಗ್ ಸುರ್ಜೇವಾಲಾ ಶನಿವಾರ ಅವರ ಮನೆಗೆ ತೆರಳಿದ್ದರು.
ಈಗ ಬಿಜೆಪಿಯ ವರ್ತೂರು ಪ್ರಕಾಶ್ ಹಾಗೂ ಕೊತ್ತೂರು ಮಂಜುನಾಥ್ ನಡುವೆ ನೇರಾನೇರ ಸ್ಪರ್ಧೆಗೆ ಕೋಲಾರದಲ್ಲಿ ಅಖಾಡ ಸಿದ್ದಗೊಂಡಿದೆ.

ಹೆಚ್ಚಿನ ಸುದ್ದಿ