Monday, March 2, 2026
Homeಟಾಪ್ ನ್ಯೂಸ್ಕುಕ್ಕೆ ಸುಬ್ರಮಣ್ಯ ಬಳಿ ಭೀಕರ ಅಘಾತಕ್ಕೆ ನಾಲ್ವರು ದುರ್ಮರಣ

ಕುಕ್ಕೆ ಸುಬ್ರಮಣ್ಯ ಬಳಿ ಭೀಕರ ಅಘಾತಕ್ಕೆ ನಾಲ್ವರು ದುರ್ಮರಣ

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ನೆಟ್ಟಣ ಎಂಬಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಮಗು ಸೇರಿ ನಾಲ್ವರು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.

ತೂಫಾನ್ ಹಾಗೂ ಆಲ್ಟೋ ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಕುಕ್ಕೆ ಕಡೆ ಹೋಗುತ್ತಿದ್ದ ಕಾರು ಹಾಗೂ ಧರ್ಮಸ್ಥಳ ಕಡೆಗೆ ತೆರಳುವ ತೂಫನ್ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಒಂದು ಮಗು, ಇಬ್ಬರು ಪುರುಷರು ಹಾಗೂ ಒರ್ವ ಮಹಿಳೆ ಸೇರಿದಂತೆ ನಾಲ್ವರು, ಮೃತಪಟ್ಟಿದ್ದಾರೆ.ಇನ್ನು ಮೃತರು ಬೇಳೂರು ಕಡೆಯವರು ಎಂದು ತಿಳಿದು ಬಂದಿದ್ದು, ತೂಫನ್ ನಲ್ಲಿದ್ದವರು ಹಾಸನ ಕಡೆಯವರು ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿದ್ದು, ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಹೆಚ್ಚಿನ ಸುದ್ದಿ