Monday, October 13, 2025
Homeಆಧ್ಯಾತ್ಮಕುಕ್ಕೆ ಸುಬ್ರಹ್ಮಣ್ಯ: ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ಆದಾಯ

ಕುಕ್ಕೆ ಸುಬ್ರಹ್ಮಣ್ಯ: ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ಆದಾಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದಲ್ಲಿರುವ ಶ್ರೀಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಅತೀ ಹೆಚ್ಚು ಆದಾಯವಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಈ ವರ್ಷ 123 ಕೋಟಿ ರೂ. ಆದಾಯ ಗಳಿಕೆಯಾಗಿದೆ.

2022ರ ಎಪ್ರಿಲ್‌ನಿಂದ 2023ರ ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 123,64,49,480.47 ಕೋಟಿ ರೂ. ಆದಾಯ ಗಳಿಕೆಯಾಗಿದೆ. ಈ ಬಾರಿಯೂ ರಾಜ್ಯದಲ್ಲಿ ಮೊದಲ ಸ್ಥಾನಪಡೆಯುವ ನಿರೀಕ್ಷೆ ಇದೆ. ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಬಂದ ಆದಾಯ ಸೇರಿಸಿ ದಾಖಲೆ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗಿದೆ.

ಈ ಹಿಂದೆ 2006-07ನೇ ಸಾಲಿನಲ್ಲಿ ದೇವಸ್ಥಾನದ ಆದಾಯ 19,76 ಕೋಟಿ ರೂ. ಆಗಿತ್ತು. 2007-08ರಲ್ಲಿ 24.44 ಕೋಟಿ ರೂ. ಗಳಿಗೆ ಏರಿತ್ತು. 2008-09ರಲ್ಲಿ 31 ಕೋಟಿ ರೂ., 2009-10ರಲ್ಲಿ 38.51 ಕೋಟಿ, 2011-12ರಲ್ಲಿ 56.24 ಕೋಟಿ, 2012-13ರಲ್ಲಿ 66.76 ಕೋಟಿ, 2013-14ರಲ್ಲಿ 68 ಕೋಟಿ, 2014-15ರಲ್ಲಿ 77 ಕೋಟಿ, 2015-16ರಲ್ಲಿ 88 ಕೋಟಿ, 2016-17ರಲ್ಲಿ 91.69 ಕೋಟಿ, 2017-18ರಲ್ಲಿ 95.92 ಕೋಟಿ, 2018-19ರಲ್ಲಿ 92,09 ಕೋಟಿ, 2019-20ರಲ್ಲಿ 98.92 ಕೋಟಿ, 2020-21ರಲ್ಲಿ 68.94 ಕೋಟಿ, 2021-22ರಲ್ಲಿ 12.73 ಕೋಟಿ ಆದಾಯ ಬಂದಿತ್ತು.

ಹೆಚ್ಚಿನ ಸುದ್ದಿ