Saturday, June 27, 2026
Homeಚುನಾವಣೆ 2023ಬಿಜೆಪಿ ಮತ್ತೊಂದು ವಿಕೆಟ್ ಪತನ : ಪಕ್ಷೇತರರಾಗಿ ಕಣಕ್ಕಿಳಿಯಲಿರುವ ಮುದ್ದಹನುಮೇಗೌಡ

ಬಿಜೆಪಿ ಮತ್ತೊಂದು ವಿಕೆಟ್ ಪತನ : ಪಕ್ಷೇತರರಾಗಿ ಕಣಕ್ಕಿಳಿಯಲಿರುವ ಮುದ್ದಹನುಮೇಗೌಡ

ತುಮಕೂರು : ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಅನ್ಯಾಯವಾಗಿರುವ ಕಾರಣ ಈ ಬಾರಿ ಕುಣಿಗಲ್ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಬಿಜೆಪಿ ನಾಯಕ ಮುದ್ದಹನುಮೇಗೌಡ ಘೋಷಿಸಿದ್ದಾರೆ. ಯಾರೇನೇ ಮಾಡಿದರೂ ಜನರ ತೀರ್ಪೇ ಅಂತಿಮವಾಗಿರುವುದರಿಂದ ಜನತಾ ನ್ಯಾಯಾಲಯದಲ್ಲೇ ನ್ಯಾಯ ಕೋರುತ್ತೇನೆ ಎಂದು ಮುದ್ದಹನುಮೇ ಗೌಡ ಅವಲತ್ತುಕೊಂಡಿದ್ದಾರೆ.
ಕಾಂಗ್ರೆಸ್ ಮೂರು ಬಾರಿ ಹಾಗೂ ಜೆಡಿಎಸ್ ಒಂದು ಬಾರಿ ಟಿಕೆಟ್ ನೀಡದೇ ವಂಚಿಸಿತ್ತು. ಈಗ ಬಿಜೆಪಿಯೂ ಸಹ ಟಿಕೆಟ್ ನೀಡಿಲ್ಲ ಎಂದು ನೋವು ತೋಡಿಕೊಂಡ ಮುದ್ದಹನುಮೇಗೌಡರು, ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸುವ ಉದ್ದೇಶದಿಂದಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದೆ. ಇಲ್ಲಿಯೂ ಟಿಕೆಟ್ ಸಿಗದಿರುವುದರಿಂದ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ನುಡಿದಿದ್ದಾರೆ.

ಹೆಚ್ಚಿನ ಸುದ್ದಿ