Tuesday, July 8, 2025
Homeಚುನಾವಣೆ 2023ನಾನು ಅಂದರೆ ನಿಷ್ಠೆ - ಹೊಂದಾಣಿಕೆ ರಾಜಕಾರಣ ನನಗೆ ಗೊತ್ತಿಲ್ಲ : ಲಕ್ಷ್ಮಣ ಸವದಿ

ನಾನು ಅಂದರೆ ನಿಷ್ಠೆ – ಹೊಂದಾಣಿಕೆ ರಾಜಕಾರಣ ನನಗೆ ಗೊತ್ತಿಲ್ಲ : ಲಕ್ಷ್ಮಣ ಸವದಿ

ಬೆಂಗಳೂರು: ನಿರೀಕ್ಷೆಯಂತೆಯೇ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಶುಕ್ರವಾರ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣ್‌ದೀಪ್ ಸಿಂಗ್ ಸುರ್ಜೇವಾಲಾ ಕಾಂಗ್ರೆಸ್ ಬಾವುಟ ನೀಡಿ ಸವದಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಎಂಬಿ ಪಾಟೀಲ್, ಡಿ.ಕೆ.ಶಿವಕುಮಾರ್ ಮತ್ತಿತರರಿದ್ದರು.
ಈ ವೇಳೆ ಲಕ್ಷ್ಮಣ ಸವದಿ ಮಾತನಾಡಿ, ಸೋತರೂ ಸಹ ಡಿಸಿಎಂ ಸ್ಥಾನ ನೀಡಿದ ಬಿಜೆಪಿ ತೊರೆದು ನಾನು ಯಾಕೆ ಕಾಂಗ್ರೆಸ್ ಸೇರುತ್ತಿದ್ದೇನೆಂದು ಹಲವರಿಗೆ ಗೊಂದಲವಾಗಿರಬಹುದು. ನಾನು ಕೇಳದೆಯೇ ಡಿಸಿಎಂ ಸ್ಥಾನ ಕೊಟ್ಟ ಬಿಜೆಪಿ, ನನ್ನನ್ನು ಕೇಳದೆಯೇ ಆ ಸ್ಥಾನದಿಂದ ಕೆಳಗಿಳಿಸಿತು. ಈಗ ಅಥಣಿಯಿಂದ 2023 ರಲ್ಲಿ ಟಿಕೆಟ್ ನೀಡುವುದಾಗಿ ವಚನ ನೀಡಿದ್ದ ರಾಷ್ಟ್ರೀಯ ನಾಯಕರು ಮಾತು ತಪ್ಪಿದ್ದಾರೆ. ನನ್ನ ಕ್ಷೇತ್ರದ ಕಾರ್ಯಕರ್ತರೊಡನೆ ಸಮಾಲೋಚನೆ ನಡೆಸಿ ಅವರ ಸಲಹೆಯಂತೆ ಈ ತೀರ್ಮಾನ ಕೈಗೊಳ್ಳುತ್ತಿದ್ದೇನೆ. ಬಿಜೆಪಿ ಪಕ್ಷಕ್ಕೆ ಯಾವ ರೀತಿ ನಿಷ್ಠೆಯಿಂದ ಇದ್ದೆನೋ ಅದೇ ರೀತಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯಲಿದ್ದೇನೆ ಎಂದರು.
ನನಗೆ ಹೊಂದಾಣಿಕೆ ರಾಜಕೀಯ ಗೊತ್ತಿಲ್ಲ. ಸವದಿ ಇದ್ದಕಡೆ ನಿಷ್ಠೆ ಇರುತ್ತದೆ ಎಂದು ಘೋಷಿಸಿಕೊಂಡ ಅವರು, ಮಾನದಂಡಗಳ ಆಧಾರದ ಮೇಲೆ ಟಿಕೆಟ್ ಹಂಚುವುದಾಗಿ ಹೇಳಿದ್ದ ಬಿಜೆಪಿ ಎಲ್ಲ ಮಾನದಂಡಗಳನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿದರು. ರಾಜ್ಯದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದ ಸವದಿ, ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಿ ನನ್ನ ಅವಶ್ಯಕತೆಯಿದೆಯೋ ಅಲ್ಲಿ ಬಳಸಿಕೊಳ್ಳುವಂತೆ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿರುವುದಾಗಿ ಹೇಳಿದರು.

ಹೆಚ್ಚಿನ ಸುದ್ದಿ