ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆದಾಯ ಕೇವಲ ಐದು ವರ್ಷಗಳಲ್ಲಿ ಕೋಟ್ಯಂತರ ರೂ. ಹೆಚ್ಚಳವಾಗಿದೆ. ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅವರು, ಆದಾಯ ಹಾಗೂ ಆಸ್ತಿ ವಿವರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದು, 7.15 ಕೋಟಿ ರೂ. ಆದಾಯ ಹೊಂದಿರುವುದಾಗಿ ಘೋಷಿಸಿದ್ದಾರೆ.
2018ರಲ್ಲಿ 56.58 ಲಕ್ಷ ರೂ. ಆದಾಯ ಹೊಂದಿದ್ದ ಶಾಸಕಿ ಹೆಬ್ಬಾಳ್ಕರ್, 2022ರ ವೇಳೆಗೆ 7.15 ಕೋಟಿ ರೂ. ಆದಾಯ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರೊಂದಿಗೆ ಐದು ವರ್ಷಗಳ ಅವಧಿಯಲ್ಲಿ ಅವರ ಆದಾಯ 6.70 ಕೋಟಿ ರೂ. ಹೆಚ್ಚಳವಾದಂತಾಗಿದೆ.
10.86 ಕೋಟಿ ರೂ.ಮೌಲ್ಯದ ಚರಾಸ್ತಿ, 1.90 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ, 5.65 ಕೋಟಿ ರೂ.ಗೂ ಹೆಚ್ಚು ಸಾಲವಿದೆ ಎಂಉ ತೋರಿಸಿದ್ದಾರೆ. ಈ ಪೈಕಿ 72.58 ಲಕ್ಷ ರೂ. ಗೃಹಸಾಲ, 8.19 ಲಕ್ಷ ರೂ. ವಾಹನ ಸಾಲ ಆಗಿದೆ. ಇನ್ನೂ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮೂರು ಅಪರಾಧ ಪ್ರಕರಣಗಳು ದಾಖಲಾಗಿವೆ.