Monday, July 7, 2025
Homeಟಾಪ್ ನ್ಯೂಸ್ಗಾಂಜಾ ಕೃಷಿ ಕಾನೂನು ಬದ್ಧಗೊಳಿಸಿ: ನಟ ಚೇತನ್

ಗಾಂಜಾ ಕೃಷಿ ಕಾನೂನು ಬದ್ಧಗೊಳಿಸಿ: ನಟ ಚೇತನ್

ಸದಾ ವಿವಾದದ ಸುಳಿಗೆ ಸಿಲುಕುವ ನಟ ಚೇತನ್‌ ಅಹಿಂಸಾ ಕಾಂಜಾ ಕೃಷಿಯನ್ನು ಕಾನೂನು ಬದ್ಧಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಹಿಮಾಚಲದ ಮುಖ್ಯಮಂತ್ರಿಗಳಾದ ಸುಖವಿಂದರ್ ಸುಖು ಅವರು ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಲು ಯೋಜಿಸಿರುವುದನ್ನು ಉಲ್ಲೇಖಿಸಿದ ಚೇತನ್ಮ “ಇದು ಒಳ್ಳೆಯದು, ಈ ಕೃಷಿಯು ರಾಜ್ಯದ ಆದಾಯವನ್ನು ಹೇಗೆ ಹೆಚ್ಚಿಸುತ್ತದೆ ಮತ್ತು ರೋಗಿಗಳಿಗೆ ಔಷಧೀಯ ಪ್ರಯೋಜನಗಳನ್ನು  ಹೇಗೆ ಒದಗಿಸುತ್ತದೆ ಎಂಬುದನ್ನು 5-ಸದಸ್ಯ ಸಮಿತಿಯೊಂದು ಅಧ್ಯಯನ ಮಾಡುತ್ತದೆ” ಎಂದು ಹೇಳಿದ್ದಾರೆ.

ಉತ್ತರಾಖಂಡ, ಗುಜರಾತ್, ಉತ್ತರ ಪ್ರದೇಶ, ಮಧ್ಯ ಪ್ರದೇಶದಂತೆ, ಕರ್ನಾಟಕವೂ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವತ್ತ ಗಮನಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಹೆಚ್ಚಿನ ಸುದ್ದಿ