Wednesday, October 8, 2025
Homeಚುನಾವಣೆ 2023ಲಿಂಗಾಯತರಿಗೆ ಸುಣ್ಣ ಆರೆಸ್ಸೆಸ್ಸಿಗರಿಗೆ ಬೆಣ್ಣೆ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ಟೀಕೆ

ಲಿಂಗಾಯತರಿಗೆ ಸುಣ್ಣ ಆರೆಸ್ಸೆಸ್ಸಿಗರಿಗೆ ಬೆಣ್ಣೆ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ಟೀಕೆ

ಬೆಂಗಳೂರು: ಬಿಜೆಪಿ ಲಿಂಗಾಯತರ ಕಣ್ಣಿಗೆ ಸುಣ್ಣ, ಆರ್‌ಎಸ್‌ಎಸಿಗರ ಕಣ್ಣಿಗೆ ಬೆಣ್ಣೆ ಹಚ್ಚುತ್ತಿದೆಯಾ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ಬಿಜೆಪಿ ವಿರುದ್ಧ ಬಂಡಾಯವೆದ್ದ ಮಾಡಾಳ್ ಮಲ್ಲಿಕಾರ್ಜುನರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿರುವ ಕುರಿತಂತೆ ಕಾಂಗ್ರೆಸ್‌ ಟೀಕಿಸಿದೆ.

ಪುತ್ತೂರಿನ ಪಕ್ಷೇತರ ಸ್ಪರ್ಧಿ ಆರೆಸ್ಸೆಸ್ಸಿನ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಯಾವುದೇ ಕ್ರಮವಿಲ್ಲ, ಆದರೆ, ಲಿಂಗಾಯತ ಸಮುದಾಯದ ಮಾಡಾಳ್‌ ಮಲ್ಲಿಕಾರ್ಜುನರನ್ನು ಉಚ್ಛಾಟಿಸಲಾಗಿದೆ. ಲಿಂಗಾಯತರಿಗೆ ಸುಣ್ಣ ಆರೆಸ್ಸೆಸ್ಸಿಗರಿಗೆ ಬೆಣ್ಣೆ? ಪುತ್ತಿಲ ಮೇಲೆ ಕ್ರಮ ಕೈಗೊಳ್ಳಲು ಧೈರ್ಯ ಸಾಲದೇ? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

 

ಹೆಚ್ಚಿನ ಸುದ್ದಿ