ಲಕ್ನೋ: ಮೃತ ಮಹಿಳೆಯೊಬ್ಬರ ಹೆಬ್ಬೆಟ್ಟು ಗುರುತನ್ನು ಉಯಿಲು ಪತ್ರದ ಮೇಲೆ ಅಚ್ಚೊತ್ತುತ್ತಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ ಎನ್ನಲಾಗಿದೆ.
ಕಾನೂನು ದಾಖಲೆಗಳಲ್ಲಿ ಮೃತ ಮಹಿಳೆಯ ಹೆಬ್ಬೆರಳಿನ ಗುರುತನ್ನು ವ್ಯಕ್ತಿಯೊಬ್ಬ ಅಚ್ಚೊತ್ತಿತ್ತಿರುವ ವಿಡಿಯೋ ಇದಾಗಿದೆ. ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಹೆಬ್ಬೆರಳಿನ ಗುರುತನ್ನು ಈತ ಪಡೆದಿದ್ದಾನೆ ಎನ್ನಲಾಗಿದೆ.
45 ಸೆಕೆಂಡ್‌ಗಳ ವೀಡಿಯೊದಲ್ಲಿ ಮೃತ ಮಹಿಳೆ ಕಾರಿನಲ್ಲಿರುವುದು ಮತ್ತು ಸಂಬಂಧಿಯೊಬ್ಬ ಹೆಬ್ಬೆರಳು ಗುರುತು ಪಡೆಯುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಳಕೆದಾರರು ಒತ್ತಾಯಿಸಿದರು.