ಹೊಸದಿಲ್ಲಿ: ಮಣಿಪುರ ಬಿಜೆಪಿಯೊಳಗೆ ಆಂತರಿಕಬಿಕ್ಕಟ್ಟು ಉಲ್ಬಣವಾಗಿದ್ದು, 15 ದಿನಗಳೊಳಗೆ ಮೂವರು ಶಾಸಕರು ರಾಜೀನಾಮೆ ನೀಡಿದ್ದಾರೆ.
ಅಸಮಾಧಾನ ಸ್ಪೋಟದ ಸೂಚನೆ ಸಿಕ್ಕಿರುವ ಬೆನ್ನಿಗೇ ಈ ಬೆಳವಣಿಗೆಗಳ ಕುರಿತು ಚರ್ಚಿಸಲು ಬಿಜೆಪಿ ಆಡಳಿತ ಶುಕ್ರವಾರ ಸಭೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಶಾಸಕ ಪೌನಮ್ ಬ್ರೋಜೆನ್ ಗುರುವಾರ ರಾಜೀನಾಮೆ ನೀಡಿದ ಮೂರನೇ ಶಾಸಕರಾಗಿದ್ದಾರೆ.
ಮಣಿಪುರದ ರಾಜ್ಯದ ನಾಲ್ವರು ಬಿಜೆಪಿ ಶಾಸಕರು ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು, ಪಕ್ಷದ ಕೇಂದ್ರ ನಾಯಕತ್ವವನ್ನು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ತೋಡಿಕೊಂಡಿದ್ದಾರೆ. ಅವರಲ್ಲಿ ಮೂವರು ತಾವು ಹೊಂದಿದ್ದ ಆಡಳಿತಾತ್ಮಕ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಮಣಿಪುರ ಬಿಜೆಪಿಯ 10 ಶಾಸಕರು ದಿಲ್ಲಿಯಲ್ಲಿ ಮಣಿಪುರ ಸಿಎಂ ಬಿರೇನ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದ್ದರು.