Saturday, June 27, 2026
Homeಚುನಾವಣೆ 2023ಕಾರ್ಕಳ ಕಾಂಗ್ರೆಸ್‌ ಟಿಕೆಟ್‌ ಡೀಲ್‌ ಆಗಿದೆ: ಬ್ಲಾಕ್‌ ಅಧ್ಯಕ್ಷ ರಾಜಿನಾಮೆ

ಕಾರ್ಕಳ ಕಾಂಗ್ರೆಸ್‌ ಟಿಕೆಟ್‌ ಡೀಲ್‌ ಆಗಿದೆ: ಬ್ಲಾಕ್‌ ಅಧ್ಯಕ್ಷ ರಾಜಿನಾಮೆ

ಕಾರ್ಕಳ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಮಂಜುನಾಥ್‌ ಪೂಜಾರಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದು, ಡಿಕೆ ಶಿವಕುಮಾರ್‌ ವಿರುದ್ಧ ಹರಿಹಾಯ್ದಿದ್ದಾರೆ.

ಡಿಕೆಶಿ ಪಕ್ಷದ ರಾಜ್ಯಾಧ್ಯಕ್ಷ ಆದ ಮೇಲೆ ಆಡಿದ್ದೇ ಆಟವಾಗಿದೆ. ಪಕ್ಷ ಸಂಘಟನೆ ಮಾಡಿದವರಿಗೆ ಟಿಕೆಟ್‌ ಕೊಡದೆ, ಕಾಂಗ್ರೆಸ್‌ ಅನ್ನು ಮಾರುತ್ತಿದ್ದಾರೆ. ಹಣಕ್ಕಾಗಿ ಪಕ್ಷ ಹಾಗೂ ಟಿಕೆಟ್‌ ಮಾರಾಟವಾಗುತ್ತಿದೆ ಎಂದು ಮಂಜುನಾಥ್ ಪೂಜಾರಿ ಆರೋಪ ಮಾಡಿದ್ದಾರೆ.

ವಿನಯಕುಮಾರ್‌ ಸೊರಕೆ ವಿರುದ್ಧವೂ ಕಿಡಿಕಾರಿದ ಪೂಜಾರಿ, ಪುತ್ತೂರಿನಿಂದ ಬಂದು ಉಡುಪಿ ಕಾಂಗ್ರೆಸ್‌ ಅನ್ನು ನಿರ್ನಾಮ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಕಾರ್ಕಳ ಟಿಕೆಟ್‌ ಡೀಲ್‌ ಆಗಿದೆ, ಸ್ಕ್ರೀನಿಂಗ್‌ ಕಮಿಟಿ ಸದಸ್ಯರಿಗೆ ಎರಡು ಕೋಟಿ ದುಡ್ಡು ಕೊಟ್ಟು ಟಿಕೆಟ್‌ ತಂದಿದ್ದಾರೆ. ಹಾಗಾಗಿ, ನಾನು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಪೂಜಾರಿ ಹೇಳಿದ್ದಾರೆ.

ಹೆಚ್ಚಿನ ಸುದ್ದಿ