ಬ್ರಿಟನ್: ಮಿನಿಸ್ಕರ್ಟ್ ಅನ್ನು ಜನಪ್ರಿಯಗೊಳಿಸಿದ ಬ್ರಿಟನ್‌ನ ಸ್ವಿಂಗಿಂಗ್ ಸಿಕ್ಸ್ಟೀಸ್‌ನ ಫ್ಯಾಷನ್ ರಾಣಿ ಮೇರಿ ಕ್ವಾಂಟ್ ಅವರು 93 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕ್ವಾಂಟ್ ಇಂದು ಬೆಳಿಗ್ಗೆ ಯುಕೆಯಲ್ಲಿ ಇರುವ ಸರ್ರೆಯ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೇರಿ ಕ್ವಾಂಟ್ ಅವರು 20 ನೇ ಶತಮಾನದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಫ್ಯಾಷನ್ ವಿನ್ಯಾಸಕರಲ್ಲಿ ಒಬ್ಬರು ಮತ್ತು ಅತ್ಯುತ್ತಮ ನವೋದ್ಯಮಿ ಎಂದು ಕೂಡ ಹೆಸರುವಾಸಿಯಾಗಿದ್ದರು.
ಅಲ್ಲದೇ ಮೇರಿ ಕ್ವಾಂಟ್ ಅವರ ವ್ಯಕ್ತಿತ್ವ ಮತ್ತು ಮಿನಿಸ್ಕರ್ಟ್ ಶೈಲಿಯು ಅವರನ್ನ “ಈ ದೇಶದಿಂದ ಹೊರಬಂದ ಅತ್ಯಂತ ಪ್ರಸಿದ್ಧ ಫ್ಯಾಷನ್ ಡಿಸೈನರ್” ಎಂದು 2014 ರಲ್ಲಿ ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನ ಫ್ಯಾಶನ್ ಕ್ಯುರೇಟರ್ ಜೆನ್ನಿ ಲಿಸ್ಟರ್ ಹೇಳಿದ್ದರು ಎಂದು ತಿಳಿದುಬಂದಿದೆ.