ನವದೆಹಲಿ: ಗುರುಗ್ರಾಮ್ ಮೂಲದ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ, ಭಾರತದ ಈಶಾನ್ಯ ರಾಜ್ಯವಾದ ಮಿಝೋರಾಂ ದೇಶದ ‘ಸಂತೋಷದ ರಾಜ್ಯ’ ಎಂದು ಘೋಷಿಸಲಾಗಿದೆ.
ವಿದ್ಯಾರ್ಥಿಗಳು ಮತ್ತು ಅವರ ಶಿಕ್ಷಕರ ನಡುವಿನ ಸಂಬಂಧವನ್ನು ಒಳಗೊಂಡಂತೆ ಈ ಸೂಚ್ಯಂಕವನ್ನು ಅಳೆಯಲು ಹಲವು ಮಾನದಂಡಗಳನ್ನ ಬಳಸಲಾಗುತ್ತದೆ.
100% ಸಾಕ್ಷರತೆ ಹೊಂದಿರುವ ಎರಡನೇ ರಾಜ್ಯವಾದ ಮಿಜೋರಾಂನ ಸಾಮಾಜಿಕ ವ್ಯವಸ್ಥೆಯ ರಚನೆಯೇ ಅಲ್ಲಿನ ಯುವಜನತೆ ಸಂತೋಷದಿಂದ ಇರಲು ಕಾರಣ ಎಂದು ಈ ವರದಿ ಹೇಳಿದೆ.
ಮಿಝೋರಾಂನ ಯುವ ಸಮುದಾಯ ಯಾವುದೇ ಲಿಂಗಬೇಧವಿಲ್ಲದೆ, ಸಣ್ಣ ವಯಸ್ಸಿನಿಂದಲೇ ಸ್ವತಂತ್ರರಾಗಿ ಬದುಕಲು ಹಂಬಲಿಸುತ್ತಾರೆ. ಕೆಲಸದ ವಿಷಯದಲ್ಲೂ ಯಾವುದನ್ನೂ ಸಣ್ಣ ಕೆಲಸ ಎಂದು ಪರಿಗಣಿಸುವುದಿಲ್ಲ ಎಂದು ಈ ವರದಿ ಹೇಳಿದೆ.