Tuesday, October 7, 2025
Homeಟಾಪ್ ನ್ಯೂಸ್ಪ್ರೇಯಸಿಯ ಬರ್ತ್‌ಡೇ - ಕೇಕ್ ಕಟ್ ಮಾಡಿದ ಬಳಿಕ ಕತ್ತು ಕೊಯ್ದ ಪ್ರಿಯಕರ!

ಪ್ರೇಯಸಿಯ ಬರ್ತ್‌ಡೇ – ಕೇಕ್ ಕಟ್ ಮಾಡಿದ ಬಳಿಕ ಕತ್ತು ಕೊಯ್ದ ಪ್ರಿಯಕರ!

ಬೆಂಗಳೂರು: ತನ್ನ ಪ್ರೇಯಸಿ ಮತ್ತೊಬ್ಬನೊಡನೆ ಚಾಟ್ ಮಾಡುತ್ತಿದ್ದಾಳೆಂಬ ಅನುಮಾನದ ಮೇಲೆ ಸ್ವತಃ ಪ್ರಿಯಕರನೇ ಆಕೆಯ ಕತ್ತು ಕೊಯ್ದು ದಾರುಣವಾಗಿ ಹತ್ಯೆಗೈದಿರುವ ಘಟನೆ ಲಗ್ಗೆರೆಯಲ್ಲಿ ಶುಕ್ರವಾರ ನಡೆದಿದೆ. ನವ್ಯಾ(25) ಮೃತ ದುರ್ದೈವಿ. ಹಂತಕ ಪ್ರಶಾಂತ್‌ನನ್ನು ರಾಜಗೋಪಾಲನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕನಕಪುರ ಮೂಲದ ನವ್ಯ ಮತ್ತು ಪ್ರಶಾಂತ್ ಸಂಬಂಧಿಗಳೂ ಆಗಿದ್ದರು. ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ನವ್ಯಾ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದಳು. ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಮಂಗಳವಾರ ನವ್ಯಳ ಹುಟ್ಟುಹಬ್ಬ ಇತ್ತು. ಆದರೆ ಅಂದು ಬ್ಯುಸಿ ಇದ್ದೇನೆ ಎಂದಿದ್ದ ಪ್ರಶಾಂತ್ ಶುಕ್ರವಾರ ಹುಟ್ಟುಹಬ್ಬದ ಆಚರಣೆಗೆ ಸಿದ್ದತೆ ಮಾಡಿಕೊಂಡಿದ್ದ. ರಾತ್ರಿ ಹುಟ್ಟುಹಬ್ಬ ಆಚರಣೆಯ ಬಳಿಕ ಬೇರೊಂದು ವಿಷಯಕ್ಕೆ ಇಬ್ಬರ ಮಧ್ಯ ವಿವಾದ ಉಂಟಾಗಿತ್ತು. ಇದೇ ವೇಳೆ ಪ್ರಶಾಂತ್ ಕೋಪದ ಕೈಗೆ ಬುದ್ದಿಕೊಟ್ಟು ನವ್ಯಾಳನ್ನು ಹತ್ಯೆಗೈದಿದ್ದಾನೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿರುವ ಪೊಲೀಸರು. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಹೆಚ್ಚಿನ ಸುದ್ದಿ