Monday, March 2, 2026
Homeವಿದೇಶಮ್ಯಾನ್ಮಾರ್ ಸೇನೆಯ ವಾಯುದಾಳಿ: ಮಕ್ಕಳು ಸೇರಿ 100 ಮಂದಿ ಮೃತ್ಯು

ಮ್ಯಾನ್ಮಾರ್ ಸೇನೆಯ ವಾಯುದಾಳಿ: ಮಕ್ಕಳು ಸೇರಿ 100 ಮಂದಿ ಮೃತ್ಯು

ಮ್ಯಾನ್ಮಾರ್: ಕಾರ್ಯಕ್ರಮವೊಂದು ನಡೆಯುತ್ತಿದ್ದ ವೇಳೆ ಮ್ಯಾನ್ಮಾರ್ ಸೇನೆ ನಡೆಸಿದ ವಾಯುದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿ 100 ಮಂದಿ ಮೃತಪಟ್ಟ ಘಟನೆ ನಡೆದಿದೆ.

ಮ್ಯಾನ್ಮಾರ್ ಮಿಲಿಟರಿ ಆಡಳಿತವನ್ನು ವಿರೋಧಿಸಿದವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎನ್ನಲಾಗಿದೆ.

ಬೆಳಗ್ಗೆ 8 ಗಂಟೆ ಸುಮಾರಿಗೆ ಕಾರ್ಯಕ್ರಮ ನಡೆಯುತ್ತಿದ್ದಾಗ ಫೈಟರ್ ಜೆಟ್ ಒಂದು ಬಾಂಬ್ ದಾಳಿ ನಡೆಸಿದೆ.

ಘಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿ 100 ಮಂದಿ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಮೃತರಲ್ಲಿ 20ರಿಂದ 30 ಮಕ್ಕಳಿದ್ದಾರೆ ಎನ್ನಲಾಗಿದೆ‌.

ಹೆಚ್ಚಿನ ಸುದ್ದಿ