Monday, March 2, 2026
Homeಬೆಂಗಳೂರುನಮ್ಮ ಮೆಟ್ರೋದಲ್ಲಿ ಇಂದಿನಿಂದ ಎನ್‍ಸಿಎಂ ಕಾರ್ಡ್ ಸೇವೆ ಚಾಲನೆ

ನಮ್ಮ ಮೆಟ್ರೋದಲ್ಲಿ ಇಂದಿನಿಂದ ಎನ್‍ಸಿಎಂ ಕಾರ್ಡ್ ಸೇವೆ ಚಾಲನೆ

ಬೆಂಗಳೂರಿನ ಅತಿವೇಗದ ಸಾರಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ಮೆಟ್ರೋದಲ್ಲಿ ಗುರುವಾರದಿಂದ “ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್” ಬಳಸಿ ಸಂಚರಿಸುವ ಸೇವೆಗೆ ಚಾಲನೆ ನೀಡಲಾಗುತ್ತಿದೆ. ಮೆಟ್ರೋ ನೂತನ ಮಾರ್ಗವನ್ನು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದ್ದರು. ಪ್ರಧಾನಿ ಮೋದಿ ಎನ್‍ಸಿಎಂಸಿ ಕಾರ್ಡ್ ಬಳಸಿ ಪ್ರಯಾಣಿಸಿದ ಮೊದಲ ಪ್ರಯಾಣಿಕರಾಗಿದ್ದಾರೆ. ಗುರುವಾರದಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲೂ ಸಹ ಆರ್‍ಬಿಎಲ್ ಬ್ಯಾಂಕ್‍ನ ರುಪೆ ಎನ್‍ಸಿಎಂ ಕಾರ್ಡ್ ದೊರೆಯಲಿದೆ.
ಒಂದು ದೇಶ ಒಂದು ಕಾರ್ಡ್ ಪರಿಕಲ್ಪನೆಯಡಿ ಎನ್‍ಸಿಎಂ ಕಾರ್ಡ್ ನ್ನು ಕೆಲವರ್ಷಗಳ ಹಿಂದೆ ಪರಿಚಯಿಸಲಾಗಿದ್ದು, ದೇಶದ ಎಲ್ಲಾ ಸಾರಿಗೆ ಪ್ರಯಾಣಕ್ಕೂ ಸಹ ಈ ಕಾರ್ಡ್‍ನ್ನು ಬಳಸಬಹುದಾಗಿದೆ. ಜೊತೆಗೆ ಬಸ್, ಪಾರ್ಕಿಂಗ್, ಮೆಟ್ರೋ ಸಂಪರ್ಕ, ರೀಟೇಲ್, ಶಾಪಿಂಗ್ ನಲ್ಲಿಯೂ ಸಹ ಈ ಕಾರ್ಡ್ ಚಲಾವಣೆಗೊಳ್ಳಲಿದೆ.
ಇದನ್ನು ಅಳವಡಿಸಿಕೊಳ್ಳುವ ಬಗ್ಗೆ ಬಿಎಂಟಿಸಿ ಸಹ ಚಿಂತನೆ ನಡೆಸಿದೆ.

ಹೆಚ್ಚಿನ ಸುದ್ದಿ