Monday, October 13, 2025
Homeಚುನಾವಣೆ 2023ಬೊಮ್ಮಾಯಿ ವಿರುದ್ಧ ಅವಾಚ್ಯ ನಿಂದನೆ ಮಾಡಿದ ಶಾಸಕ ಓಲೇಕಾರ

ಬೊಮ್ಮಾಯಿ ವಿರುದ್ಧ ಅವಾಚ್ಯ ನಿಂದನೆ ಮಾಡಿದ ಶಾಸಕ ಓಲೇಕಾರ

ಬಿಜೆಪಿ ಟಿಕೆಟ್‌ ವಂಚಿತ ಶಾಸಕ ನೆಹರು ಓಲೇಕಾರ್‌ ಅಚರು ಸಿಎಂ ಬೊಮ್ಮಾಯಿಯವರ ಬಗ್ಗೆ ಏಕವಚನದಲ್ಲಿ ಮಾತನಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ.

ಹಾವೇರಿ ನಗರದ ತಮ್ಮ ನಿವಾಸದಲ್ಲಿ ಶನಿವಾರ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿರುವ ವಿಡಿಯೊ ಇದು ಎನ್ನಲಾಗಿದೆ.

‘ಬೊಮ್ಮಾಯಿ ನನ್ನ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾನೆ. ಹಿಂದಿನ ಬಾರಿ ಟಿಕೆಟ್‌ ತಪ್ಪಿಸಲು ಪ್ರಯತ್ನ ಮಾಡಿದ್ದ. ಕಡೇ ದಿನ ಬಿ–ಫಾರಂ ಬಂತು. ಅದಕ್ಕೆ ಕಾರಣ ಬಸವರಾಜ ಬೊಮ್ಮಾಯಿ. ನಾನು ಅವರ ಲೆವಲಿಗೆ ಬೆಳೆಯುತ್ತಿದ್ದೇನೆ ಎಂಬ ಕಾರಣಕ್ಕೆ ಟಿಕೆಟ್‌ ತಪ್ಪಿಸಿದ್ದಾರೆ’ ಎಂದು ಓಲೇಕಾರ್‌ ಆರೋಪಿಸಿದ್ದಾರೆ. 

“ಈ ಸೂ*ಮಗ ಚಿತ್ರನಟ– ನಟಿಯರನ್ನು ಕರೆಸಿ ಕ್ಯಾನ್ವಾಸ್‌ ಮಾಡಿಸಬೇಕೆಂದಿದ್ರೆ, ಸಾಮಾನ್ಯರಿಗೆ ಯಾವ ಬೆಲೆ ಕೊಡ್ತಾನೆ. ಕ್ಷೇತ್ರದ ಯಾವುದೇ ಜನರಿಗೆ ಈತ ಬೆಲೆ ಕೊಟ್ಟಿಲ್ಲ, ಶಾಸಕನಗಿ ಬೊ*ಮಗ ಕ್ಷೇತ್ರಕ್ಕೆ ಯಾವ ಕೆಲಸವೂ ಮಾಡಿಲ್ಲ” ಎಂದು ಹರಿಹಾಯ್ದಿದ್ದಾರೆ. 

ಸಿಎಂ ಬೊಮ್ಮಾಯಿ ರನ್ನು ʼಬೊ* *ಮಗ, ಸೂ* *ಮಗʼ ಎಂದು ಶಾಸಕರು ಕರೆದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

https://www.facebook.com/nagarajhb.nagaraj.92/videos/233778562508118

ಹೆಚ್ಚಿನ ಸುದ್ದಿ